ಬೇಲಿ
.
ಬೇಲಿ ಹಾಕಲೇಬೇಕೆಂಬುದು
ಬಹುದಿನದ ಕನಸು
ಹಾಗೆ,ಹೀಗೆ
ಬೇಕಾದ ಸರಕು ಜೋಡಣೆ,
ಭರದ ಸಿದ್ಧತೆ
ನಮ್ಮದೇ ಭದ್ರತೆಯ ಕೋಟೆಗೆ
ಅದೆಂತ ಉತ್ಸಾಹ
ಸಂಧಿ,ಗೊಂಧಿಗಳಲೂ ಹಾವು,ಜಂತೂ
ನುಸುಳದಂತೆ ಗಿಡ ನೆಟ್ಟು
ಬೇಲಿಯಲೂ ಹೂಗಳ ನಿರೀಕ್ಷೆ.
ಕನಸಿನಂತೆ ಮೊಗ್ಗು
ಬಿರಿದೇ ಇಲ್ಲವೆಂದಲ್ಲ
ಅವು
ಆರಂಭ ಶೂರತ್ವ ಗಿಡವಿರಬೇಕು
ಅರಳಿ ಉದುರಿದ ಬೀಜ
ಚಿಗುರಲೇಕೋ ಆಕಳಿಸಿ
ಎದುರಿದ್ದ ಬೇಲಿಯಲಿ
ನಳ ನಳಿಸಿದ ನೀಲಿ ಹೂವಲಿ
ಬಿದ್ದ ಕಣ್ಣ ಕೀಳಲಾಗದೆ
ಝೇಂಕರಿಸುವ ಹುನ್ನಾರ
ಕನಸಿನ ಬೇಲಿ ಸೊರಗಿ
ಕೊರಡಾಗುವುದನೊಪ್ಪದೆ
ಕೊನರಿಸಲೇಬೇಕೆಂಬ ಹಠಕ್ಕೆ ಬಿದ್ದು
ಹನಿಸಿದಷ್ಟೂ ಕಣ್ಣು ಕೊಳವಲ್ಲ
ಕಡಲು.
ಬೇಲಿ ತುಂಬಾ ಅಲ್ಲಲ್ಲಿ ಬಿರುಕು
ಸಲಗ ಪಳಗಿಸುವಂತೆ
ಕಾಷ್ಠ ಪಲ್ಲವಿಸಲು ಹೈರಾಣು.
ಮಳೆ ಹೊಯ್ಯುತ್ತಿದೆ ಈಗ
ಹೊಸ ಭರವಸೆಯ ಬೀಜ
ತಂದಿರಿಸಿರುವೆ
ತಡ ಮಾಡದೆ ಬೇಲಿಗುಂಟ
ಬಿತ್ತಬೇಕಿದೆ.
-ಸುನೀತ ಕುಶಾಲನಗರ.
.
ತುಂಬಾ ಚೆನ್ನಾಗಿದೆ ಸುನೀತ
ಚಂದದ ಕವಿತೆ.
Very nice.
Thumba chennagide sunitha
ಚೆನ್ನಾದ ಕವನ
ಬೇಲಿ, ಹೂವಿನ ಗಿಡಗಳ ಜೊತೆಗೆ ಮನಸು, ಅದರೊಳಗೊಂದು ಕನಸು, ಎಲ್ಲವೂ ಒಂದರೊಳಗೊಂದು ತಳುಕು ಹಾಕಿಕೊಂಡಿವೆ. ಚಂದದ ಕವನ
ಸುಂದರವಾದ ಕವನ. ಧನ್ಯವಾದಗಳು
ಚೆನ್ನಾಗಿದೆ ಕವಿತೆ ..,.ಸುನೀತಕ್ಕ.
‘ಹೊಸ ಭರವಸೆಯ ಬೀಜ ತಂದಿರಿಸಿರುವೆ’ ಈ ಆಶಾಭಾವ ಖುಷಿಯಾಯಿತು. ಚೆಂದದ ಕವನ.
Kavana adbuta
ತುಂಬಾ ಆರ್ಥಗಳನ್ನು ಒಳಗೊಂಡ ಕವಿತೆ. ಚೆನ್ನಾಗಿದೆ.
ಚಿಂತನೆ ಚೆನ್ನಾಗಿದೆ
ಮಹಾಬಲ
ಭರವಸೆಯ ಬೆಳಕು ಬೀರುವ ಚಂದದ ಕವನ.