“ಅಪ್ಪ ಏಕೋ”…
.
ಅಮ್ಮ ಒಂಬತ್ತು ತಿಂಗಳು ಹೊತ್ತರೆ
ಹರೆಯದವರೆಗು ಅಪ್ಪ…
ಎರಡೂ ಸಮವೇ ಆದರೂ
ಅಪ್ಪ ಏಕೋ ಹಿಂದುಳಿದಿದ್ದಾರೆ
ಮನೆಯಲ್ಲಿ ಸಂಬಳವಿಲ್ಲದೆ ಅಮ್ಮ
ತನ್ನ ಸಂಬಳವನ್ನೆಲ್ಲ ಮನೆಗೆ ಖರ್ಚು ಮಾಡುತ್ತ ಅಪ್ಪ
ಇಬ್ಬರ ಶ್ರಮವು ಸಮಾನವೇ ಆದರೂ
ಅಮ್ಮನಿಗಿಂತಲೂ ಅಪ್ಪ ಯಾಕೋ ಹಿಂದುಳಿದಿದ್ದಾರೆ
ಬಯಸಿದ ಅಡಿಗೆಯನ್ನು ಮಾಡಿ ಉಣಿಸುತ್ತಾ ಅಮ್ಮ
ಬಯಸಿದ ವಸ್ತುಗಳನ್ನ ಕೊಡಿಸುತ್ತಾ ಅಪ್ಪ
ಇಬ್ಬರ ಪ್ರೀತಿಯೂ ಸಮಾನವೇ ಆದರೂ
ಮೊದಲು ಹೆಸರಾಗಿದ್ದು ಅಮ್ಮನೇ ಅಪ್ಪ ಏಕೋ
ತುಂಬಾ ಹಿಂದೆ ಉಳಿದುಬಿಟ್ಟರು
ಫೋನ್ ನಲ್ಲೂ ಅಮ್ಮನ ಹೆಸರೇ
ಎಡವಿದಾಗಲೂ.. ಅಮ್ಮಾಯೆನ್ನುವ ಕೂಗೇ
ಅವಶ್ಯಕತೆಯಿದ್ದಾಗ ವಿನಃ
ಉಳಿದ ಸಮಯದಲ್ಲಿ ನೆನಪಾಗದೇ ಇರುವುದಕ್ಕೆ
ಅಪ್ಪ ಎಂದಾದರೂ ನೊಂದಿದ್ದಾರಾ? ಎಂದರೆ..
ಏನೋ!
ಇಬ್ಬರೂ ಸಮಾನವೇ ಆದರೂ
ಮಕ್ಕಳ ಪ್ರೀತಿಯನ್ನು ಪಡೆಯುವಲ್ಲಿ ತಲತಲಾಂತರಗಳಿಂದ
ಅಪ್ಪ ಏಕೋ ತುಂಬಾ ಹಿಂದುಳಿದಿದ್ದಾರೆ
ಕಪಾಟಿನ ತುಂಬಾ ನಮಗೆ ಅಮ್ಮನಿಗೆ
ಬಣ್ಣ ಬಣ್ಣದ ಸೀರೆ ಉಡುಪುಗಳು
ಅಪ್ಪನ ಬಟ್ಟೆಗಳು ಮಾತ್ರ ಬೆರೆಳೆಣಿಕೆಯಷ್ಟು
ತನ್ನನ್ನು ತಾನು ಗಮನಿಸಿಕೊಳ್ಳಲು ಬಾರದ ಅಪ್ಪ
ಏಕೋ ನಾವೂ ಸಹ ಗಮನಿಸದಷ್ಟು ಹಿಂದುಳಿದುಬಿಟ್ಟಿದ್ದಾರೆ
ಅಮ್ಮನಿಗೆ ಅಲ್ಪ ಸ್ವಲ್ಪ ಬಂಗಾರದ ಒಡವೆಗಳು
ಅಪ್ಪನಿಗೆ ಮಾತ್ರ ಬಂಗಾರ ಬಣ್ಣದಂಚಿನ ರೇಶಿಮೆಯ ಪಂಚೆ ಒಂದೇ
ಸಂಸಾರಕ್ಕಾಗಿ ಎಷ್ಟು ಮಾಡಿದರು
ಗುರುತಿಸುಕೊಳ್ಳುವಲ್ಲಿ ಅಪ್ಪ ಏಕೋ ತುಂಬಾನೇ ಹಿಂದುಳಿದಿದ್ದಾರೆ!
ಮಕ್ಕಳ ಶಾಲೆಯ ಶುಲ್ಕದ ಖರ್ಚಿಗಾಗಿ
ಹಬ್ಬಕ್ಕೆ ಸೀರೆ ಬೇಡವೆಂದು ಅಮ್ಮ
ಊಟ ರುಚಿಯಾಗಿತ್ತೆಂದು ಮಕ್ಕಳು ತಿಂದು ಮುಗಿಸಿದರೆ
ಆ ಹೊತ್ತಿಗೆ ಅನ್ನಕೆ ಪುಡಿಯನ್ನೇ ಇಷ್ಟಪಡುವ ಅಪ್ಪ
ಇಬ್ಬರ ಪ್ರೀತಿ ಒಂದೇ ಆದರೂ
ನಮ್ಮಮ್ಮನಿಗಿಂತಲೂ ಅಪ್ಪ ತುಂಬಾ ಹಿಂದುಳಿದಿದ್ದಾರೆ
ಇಳಿವಯಸ್ಸಿನಲ್ಲಿ
ಅಮ್ಮ ಮನೆಕೆಲಸಗಳಿಗಾಗುತ್ತಾಳೆ
ಅಪ್ಪ ಆದರೆ ಕೆಲಸಕ್ಕೆ ಬಾರದವರೆಂದು
ನಾವು ತೀರ್ಮಾನಿಸಿದಾಗಲೂ
ಹಿಂದುಳಿದಿದ್ದು ಅಪ್ಪನೇ !
ಇಷ್ಟು ನಿಸ್ವಾರ್ಥ ಜೀವಿಯಾದರು
ಅಪ್ಪ ಹೀಗುಳಿಯಲು ಕಾರಣವೊಂದೇ
ಅವರು ನಮ್ಮೆಲ್ಲರ
ಬೆನ್ನೆಲುಬು ಆಗಿರುವುದೇ!!
– ತೆಲುಗು ಮೂಲ :ಪ್ರಕಾಶ್ ಪನಸಕರ್ಲ
ಅನುವಾದ :ರೋಹಿಣಿಸತ್ಯ
ಬಹಳ ಚೆನ್ನಾಗಿ ನಿರೂಪಿಸಿದ್ದೀರಿ
Thank you
ಹೌದು, ಅಪ್ಪ ಯಾವತ್ತೂ ನಿಗೂಢ, ಆದರೂ ಮಕ್ಕಳ ಪಾಲಿಗೆ ಅವನಿಂದು ಅದ್ಭುತ ಎಂದೆಂದಿಗೂ
‘ಅಪ್ಪ ಹೀಗುಳಿಯಲು ಕಾರಣವೊಂದೇ ..ಅವರು ನಮ್ಮೆಲ್ಲರ ಬೆನ್ನೆಲುಬು ಆಗಿರುವುದೇ!!’ ಈ ಸಾಲು ಬಹಳ ಇಷ್ಟವಾಯಿತು.
ರೋಹಿಣಿ ಸತ್ಯ ಅವರೇ .. ನಿಮಗೆ ಕೃತಜ್ಞತೆಗಳು . ಮೂಲವಿಷಯನ್ನು ಚೆನ್ನಾಗೆ ಅನುವಾದ ಮಾಡಿದ್ದಾರೆ . ಶ್ರೀ ಪ್ರಕಾಶ್ ಪನಕಸರ್ಲ ಅವರು ನಮ್ಮ ಸ್ನೇಹಿತರು .. ನನಗೆ ಬಾಳಾ ಸಂತೋಷಾಯಿತ್ತು .. ( ನನಗೆ ಕನ್ನಡ ಚೆನ್ನಾಗೆ ಬರೋದಿಲ್ಲ .. ಕ್ಷಮಿಸಿರಿ .. ಶುಭವಾಗಲಿ .. !
Thank you
ಅನುವಾದಿತ ಕವನ ತುಂಬಾ ಚೆನ್ನಾಗಿದೆ.
Very nice