ನಿನ್ನೆ….ನಿನ್ನೆಗೆ…
ಬಾಳಮುಸ್ಸಂಜೆಯಲಿ
ನಿಲ್ದಾಣದೆಡೆಗೆ ಸಾಗುತ್ತಿದ್ದಾತನಿಗೆ
ಹಿಂದಿರುಗಿದಾಗ ಕಂಡದ್ದು
ಬರೀ ಮಬ್ಬು ಛಾಯೆ…
ಅಲ್ಲಲ್ಲಿ ಸಣ್ಣದಾಗಿ ಮಿಣುಕುವ
ದೀಪಗಳಿಂದಾಗಿ ಅಸ್ಪಷ್ಟವಾಗಿ ಗೋಚರಿಸಿತ್ತು
ನಡೆದು ಬಂದ ದಾರಿ
ಅದಕ್ಕಿರಲಿಲ್ಲ ಇವನ ಪರಿವೇ…..
ಕಾಯುತ್ತಿತ್ತು ಆ ದಾರಿ
ಇನ್ನಾರದೋ ಬರುವಿಕೆಗಾಗಿ
ತುಂಬು ಉತ್ಸಾಹದಿಂದ
ನಿಂತಿತ್ತು ಇವನಿಗೆ ಬೆನ್ನು ಮಾಡಿ….
ಮಿಣುಕುತ್ತಿದ್ದ ದೀಪಗಳೂ
ಕಾಯುತ್ತಿದ್ದವು ಯಾರನ್ನೋ
ಮೈಮನವನೆಲ್ಲಾ ಕಣ್ಣಾಗಿಸಿ
ಈತನ ನೆನಪನ್ನು ಮಣ್ಣು ಮಾಡಿ…
-ವಿದ್ಯಾ ಶ್ರೀ ಎಸ್. ಅಡೂರ್
ಸುಂದರವಾದ ಕವನ
ನೀವು ಬರೆಯುವಾಗ ನಿಮ್ಮದೇ ಆದ ಕಲ್ಪನೆಯಲ್ಲಿ ಬರೆದಿರಬಹುದು, ಓದುವ ನಾವು ನಮ್ಮದೇ ಆದ ಕಲ್ಪನೆಯಲ್ಲಿ ಓದಬಹುದು.
ಪದಗಳು ಒಂದೊಂದೇ ಆದರೂ ಅರ್ಥಗಳು ನೂರಾರು ಅಲ್ಲವೇ?
ಹೀಗೆಯೇ ಬರೆಯುತ್ತಿರಿ, ಹಾಗೆಯೇ ಹಾಡುತ್ತಿರಿ.
ಬರೆದದ್ದನ್ನು ಜೊಪಾನವಾಗಿಡಿ. ಮುಂದೊಂದು ದಿನ ನಿಮ್ಮ ಕವನಗಳು ಮುದ್ರಣಗೊಂಡು ಜನಪ್ರಿಯವಾಗಲಿ.
ಶುಭಾಶಯಗಳು
ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು…
ಚೆನ್ನಾಗಿದೆ ಕವನ…..
ಚಂದದ ಕವನ