ವಿಡಂಬನೆ
ಬುದ್ದನ ವಿಡಂಬನೆ
ಬೌದ್ಧರ ಭಾವನೆಗಳಿಗೆ ಧಕ್ಕೆ
ರಾಮನ ವಿಡಂಬನೆ
ಹಿಂದೂಗಳ ಭಾವನೆಗೆ ಧಕ್ಕೆ
ಮಹಮ್ಮದ ಪೈಗಂಬರರ ವಿಡಂಬನೆ
ಮುಸ್ಲಿಮ್ ರ ಭಾವನೆಗಳಿಗೆ ಧಕ್ಕೆ
ಗುರು ನಾನಕರ ವಿಡಂಬನೆ
ಸಿಖ್ಖರ ಭಾವನೆಗಳಿಗೆ ಧಕ್ಕೆ
ಅಂಬೇಡಕರರ ವಿಡಂಬನೆ
ದಲಿತರ ಭಾವನೆಗಳಿಗೆ ಧಕ್ಕೆ
ಬಸವಣ್ಣನವರ ವಿಡಂಬನೆ
ಲಿಂಗಾಯತರ ಭಾವನೆಗಳಿಗೆ ಧಕ್ಕೆ
ಮಹಾವೀರರ ವಿಡಂಬನೆ
ಜೈನರ ಭಾವನೆಗಳಿಗೆ ಧಕ್ಕೆ
ಶಂಕರ ಮಧ್ವರ ವಿಡಂಬನೆ
ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ
ಆದರೆ ,
ಮನುಷ್ಯನ ವಿಡಂಬನೆ …..
ಮಾನವೀಯತೆಯ ವಿಡಂಬನೆ
ಧಕ್ಕೆ ? ? ? ? ? ? ? ? ? ?
– ಪ್ರಕಾಶ ದೇಶಪಾಂಡೆ , ಹುಕ್ಕೇರಿ.
ವಿಡಂಬನೆ ಸಕಾಲಿಕ ಹಾಗೂ ಸೂಕ್ತವಾಗಿದೆ ಅಭಿನಂದನೆಗಳು ಸರ್
ಕವಿತೆ ಕಳಿಸಲು ಯಾವಮೇಲ್ ಬಳಸಬೇಕು
ಪ್ರಸಕ್ತ ಸಂದರ್ಭಕ್ಕೆ ಸೂಕ್ತವಾದ ಕವನ. ದೇಶಪಾಂಡೆಯವರಿಗೆ ಧನ್ಯವಾದಗಳು
ಸದ್ಯದ ಪರಿಸ್ಥಿತಿಗೆ ತಕ್ಕ ಕವನವಾಗಿದೆ
ಈ ಎಲ್ಲ ಮಹನೀಯರ ಮೌಲ್ಯಗಳು ಉನ್ನತವಾಗಿದ್ದರೂ ಅವುಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದೇವೆ .ಒಬ್ಬೊಬ್ಬರನ್ನು ಒಂದೊಂದು ಧರ್ಮಕ್ಕೆ ಸೀಮಿತಗೊಳಿಸಿದ್ದೇವೆ
ವಿಡಂಬನಾತ್ಮಕ ಕವನ ಚೆನ್ನಾಗಿದೆ ಸರ್.