ಚೈತನ್ಯ ರಥ
ಕಳೆದುಕೊಳ್ಳದಿರಿ ಧೈರ್ಯವನು
ಕಂಟಕಗಳ ನಡುವೆಯೂ
ಅರಳುವುದು ಮೆದುಳು ಭವಿತವ್ಯದಲಿ
ಬಿಟ್ಟುಕೊಡದಿರಿ ಆತ್ಮಸ್ಥೈರ್ಯವನು
ಗಂಡೆದೆಯ ಆಟವಾಡಿರಿ…
ಬೀಸಿ ಬಂದ ಬಿರುಗಾಳಿ ಜೊತೆಗೆ
ಎದುರಾಗಿ ಉರುಳಿಸಿದ ಬಂಡೆಗಲ್ಲಿಗೆ
ಎದೆಯೊಡ್ಡಿರಿ ಛಲದಲಿ…
ತಿಳಿದಾಗಿದೆ ನಿಮಗೆ
ವರ್ಷಧಾರೆಯ ದಿನಗಳಿವು
ಕೋಲಾಹಲವೆದ್ದಿದೆ ಗಗನದಲಿ
ನಿಧಾನವಿರಲಿ ಮನದ ಪರಿಚಲನೆಯಲಿ
ಕಣ್‍ಮುಂದಿವೆ ಮಿನುಗು ಹಣತೆಗಳು
ನಂಬಿಕೆಯಿರಲಿ ಆತ್ಮಸೈರ್ಯದ ಬೆಳಕಿನಲಿ
ಕಾದು ಕೂತಿದೆ ಅಸ್ತಿತ್ವವು ಮುಂದೆ
ಸದಾ ಎಂದೆಂದಿಗೂ…
ಎದುರಿನಲ್ಲಿದೆ ಬಾಳಿನಾಟದ ನೋಟ
ಸಿಡಿಮದ್ದುಗಳ ಆರ್ಭಟತೆಯಲಿ
ಸಾಗುತಿರಿ ನಿರಂತರ ದಾರಿಯಲಿ
ಬಂದು ಸೇರುವುದು ಗುರಿಯೊಂದು
ಸಾಧನೆಯ ನಿರ್ಣಯದೊಂದಿಗೆ
ಅರಳಿಸಿರಿ ಮನದಿ ಆಕಾಶಮಲ್ಲಿಗೆಯನು
ಕುಣಿದು ಸಂಭ್ರಮಿಸಿ ಬ್ರಹ್ಮಕಮಲದೊಳು
ಚೈತನ್ಯ ರಥವನೇರುತ…
-ರಾಘವೇಂದ್ರ ದೇಶಪಾಂಡೆ
ಸೊಗಸಾದ ಕವನ