ಬೆಳಕು-ಬಳ್ಳಿ

ಅಸ್ತಿತ್ವ

Share Button

ಅದೆಷ್ಟು ಆಯುಧಗಳ
ಒಗ್ಗೂಡಿಸುತ್ತಲೆ ಇರುವಿರಿ
ನನ್ನ ಅಸ್ತಿತ್ವ ಅಳಿಸಲು

ಕಥೆ ಪುರಾಣ ಶಾಸ್ತ್ರಗಳನ್ನೆಲ್ಲ
ಶಸ್ತ್ರವಾಗಿಸಿಕೊಂಡದ್ದು ಹಳತಾಯಿತು
ನನ್ನ ಅಸ್ತಿತ್ವ ಅಳಿಸಲು

ಪಾವಿತ್ರ್ಯತೆ ಅಂಧಶ್ರದ್ಧೆ ನಂಬಿಕೆಗಳ
ಶೃಂಕಲೆ ತೊಡಿಸಿದಿರಿ ಮೈಮನಕ್ಕೆ
ನನ್ನ ಅಸ್ತಿತ್ವ ಅಳಿಯಲು

ಹಿಂಸೆ ಅತ್ಯಾಚಾರಗಳಗೈದು ದುರ್ಬಲಗೊಳಿಸಿ
ಅಬಲೆ ನಾನೆಂದು ನಂಬಿಸಿದಿರಿ
ನನ್ನ ಅಸ್ತಿತ್ವ ಅಳಿಸಲು

ನ್ಯಾಯ ದೇಗುಲ ಕರಿಕೋಟು
ಮಾಧ್ಯಮ,ಆರಕ್ಷಕ ಠಾಣೆ
ಎಲ್ಲವೂ ನಿರತ
ನನ್ನ ಅಸ್ತಿತ್ವ ಅಳಿಸಲು

ಅಕ್ಷರಗಳಲಿ, ದೃಶ್ಯಗಳಲಿ,ಜಾಹೀರಾತುಗಳಲಿ
ಬಿಕರಿಯಾಗುತ್ತಿದೆ ಹೆಣ್ಣ ಮೈ
ಇದೇ ಅವಳ ಅಸ್ತಿತ್ವವೇ

ಮಸಣದಲ್ಲಿ ಹೆಣ್ಣಿನ ದನಿಗಳು
ಮಾರ್ಧನಿಸುತ್ತಿವೆ
ನನ್ನ ದೌರ್ಜನ್ಯದ ಕೇಸು ಏನಾಯಿತು?

ನಾನೂ ಹೇಳುತ್ತಿರುವೆ ನಿಮ್ಮಲ್ಲಿಗೆ ಬರುವ
ನನ್ನ ಸರದಿ ಎಂದೋ

ನಾ ಹೇಗೆ ಅಳಿಯುವೆ ನಿನ್ನ ಹೊರತು?
ನೀವು ತುಳಿದರು, ಜರಿದರೂ,
ಅಳಿವು ಒಮ್ಮೆ ಅದು ನನ್ನದು – ನಿನ್ನದು

-ಜ್ಯೋತಿ ಎಸ್.ದೇಸಾಯಿ

 

    

2 Comments on “ಅಸ್ತಿತ್ವ

  1. ಸಮಾಜದಲ್ಲಿ ಹೆಣ್ಣಿನ ಮೇಲಿನ ದಬ್ಬಾಳಿಕೆ ಸತತವಾಗಿ ನಡೆಯುತ್ತಲೇ ಇರುವುದರ ಬಗ್ಗೆ ಅತೀವ ಕಾಳಜಿ ಹೊಂದಿರುವ ಭಾವಪೂರ್ಣ ಕವನ..ಚೆನ್ನಾಗಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *