ಮಾತಿಲ್ಲ ಬೇರೆ….
ಮೂಕವಾಗಲು ಮನವು
ವಿರಚಿಸಿದೆ ಕೃತಿಯ
ಕಳವಳದ ಭಾರದಲಿ
ರೋಧಿಸಿತು ಹೃದಯ…..
ಇಂದಿಲ್ಲಿ ನಿಂತಿರುವೆ
ಮುಂದೇನನರಿಯೆ
ಕಾಲಚಕ್ರದ ಗತಿಯ
ನಾನೊಂದು ತಿಳಿಯೆ
ಕಣ್ಣಿರಲು ಕಾಣುವರೆ
ಕಣ್ಣಿನಾಗುಣವ
ಕಸದಿಂದ ತೆಗೆಯುವರು
ರಸದ ಸಿಹಿಯೊಲವ..
ಕೆಸರೊಳಗೆ ಹುಟ್ಟಿರುವ
ಕಮಲ ಪುಷ್ಪವದು
ಬಿಸಜನಾಭನ ಸಿರಿಯ
ಮುಡಿಯನೇರುವುದು
ತಪ್ಪೊoದ ಜೀವನದಿ
ಮಾಡದವನಿಹನೆ….
ಅಪ್ಪ ಕೊಂಡಾಡಿದರೆ
ಮಗನು ಹಿರಿದಹನೆ
ಹಳೆಯದೊಂದಿಗೆ ಹೊಸತು
ಕೂಡಿ ಸಾಗಿದರೆ
ಹಸನಹುದು ಬಾಂಧವ್ಯ
ಮಾತಿಲ್ಲಬೇರೆ…..
-ಕಣಿಪುರೇಶ ಪ್ರಿಯ
ಚೆಂದದ ಕವನ .
ಧನ್ಯವಾದಗಳು …..
ಧನ್ಯವಾದಗಳು….
ಹಳೆಯದೊಂದಿಗೆ ಹೊಸತು ಕೂಡಿ….. ಈ ಸಾಲುಗಳು ಇಷ್ಟವಾದುವು. ಚೆನ್ನಾಗಿದೆ ಕವನ
ಧನ್ಯವಾದಗಳು…..
ಧನ್ಯವಾದಗಳು
ಕವನ ಸರಳವಾಗಿ ಅರ್ಥವತ್ತಾಗಿದೆ. ಕೃಷ್ಣ ಪ್ರದೀಪ..
ಧನ್ಯವಾದಗಳು
ಚೆನ್ನಾಗಿದೆ ಕವನ
ಧನ್ಯವಾದಗಳು
ಚಂದದ ಕವನ.
ಧನ್ಯವಾದಗಳು