ಇವಳು ಹೆಣ್ಣಲ್ಲವೆ ?
ಹೆಣ್ಣು ಹೆಣ್ಣೆಂದು
ಏಕೆ ಹೀಗಳೆಯುವಿರಿ
ಭೂ ಮಾತೆ ಹೆಣ್ಣಲ್ಲವೆ ?
ಒಂಬತ್ತು ತಿಂಗಳು ಹೊತ್ತು
ಹೆತ್ತವಳು ಹೆಣ್ಣಲ್ಲವೆ ?.॥೧॥
ತುತ್ತು ಮುತ್ತುಗಳನಿತ್ತು
ಹೊತ್ತೊತ್ತಿಗೆ ಅನ್ನವಿಕ್ಕಿದವಳು
ಲಲ್ಲೆಗರೆದು ಮೆಲ್ಲನೆ
ಮುದ್ದುಗರೆದವಳು ಹೆಣ್ಣಲ್ಲವೆ. ?॥೨॥
ಸಾರ ಸಂಸಾರದ ನೋಗಹೊತ್ತು
ತುತ್ತಿನ ಚೀಲ ತುಂಬಿಸಿದವಳು
ಹೊತ್ತಾರೆ ಎದ್ದು ತಾ ನೋಂದರು
ಬದುಕ ಬಂಡಿನೆಳೆವವಳು ಹೆಣ್ಣಲ್ಲವೆ.?॥೩॥
ತವರು ಮನೆಯ ತೊರೆದು
ಗಂಡನ ಮನೆಯ ಬಂಡಿಯ
ಎಳೆ ಎಳೆದು ಸಾಗುವಳು
ಹಸಿವೆಯ ಪರಿವೇ ಇಲ್ಲದವಳು ಹೆಣ್ಣಲ್ಲವೆ.?॥೪॥
ತಾರ ತಮ್ಯವೇಕೆ ಹೆಣ್ಣೆಂದು
ನಮ್ಮರಥದ ಗಾಲಿಯಿವಳು
ಅವ್ವ, ಅಕ್ಕ, ತಂಗಿ, ಅತ್ತಗೆಯಾಗಿ
ಬಂದವಳು ಇವಳು ಹೆಣ್ಣಲ್ಲವೆ .?.॥೫॥
-ಮರುಳಸಿದ್ದಪ್ಪ ದೊಡ್ಡಮನಿ ,ಹುಲಕೋಟಿ
ಹೆಣ್ಣಿನಬಗ್ಗೆ ವರ್ಣನೆ ಚೆನ್ನಾಗಿದೆ
Nice. ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ಮರೆತು ತೊಡಗಿಸಿಕೊಳ್ಳುವವಳ ಸಂಪೂರ್ಣ ಚಿತ್ರಣ.
ಹೆಣ್ಣಿನ ಘನತೆ ಎತ್ತಿ ಹಿಡಿದ ನಿಮ್ಮ ಕವನ ಸೊಗಸಾಗಿದೆ.