ಕೊರೊನ
ಕೊರೊನ ಕಾಡುತಿದೆ
ಹೃದಯ ನಡುಗುತಿದೆ
ಒಲುಮೆಯ ಮರೆತು
ಮನ ಬಿಕ್ಕಿ ಚೀರುತಿದೆ..!!
.
ಗಾಳಿ ಬೀಸುತಿದೆ
ಗಾಳಿ ಬೀಸುತಿದೆ
ಪ್ರಾಣವ ಹಿಂಡುತಿದೆ
ಮುಗ್ದ ತನುಗಳ ಹಿಡಿದು
ನಿರ್ದಯದಿ ಕೊಲ್ಲುತ್ತಿದೆ..!!
.
ರಕ್ಕಸ ಕ್ರಿಮಿ ನುಸುಳುತಿದೆ
ರಕ್ಕಸ ಕ್ರಿಮಿ ನುಸುಳುತಿದೆ
ಶ್ವಾಸಕೋಶವ ಸೇರುತ್ತಿದೆ
ಎದೆಯ ತಿಂದು ಇಡೀ ಘನ
ಕಾಯವ ಉರುಳಿಸುತ್ತಿದೆ ..!!
.
ನೆಗಡಿಯೇನು ಹೊಸದೆ
ನೆಗಡಿಯೇನು ಹೊಸದೆ
ಹಸುಗೂಸಿನಿಂದಿಹುದೆ
ಕ್ಷಮತೆಯ ತಪ್ಪಿಸಿ ಇಂದು
ಮಸಣದ ಹಾದಿ ಹಿಡಿಸಿಹುದೆ..!!
.
ಅಭಿಲಾಷೆಯ ಕಸವದು
ಅಭಿಲಾಷೆಯ ಕಸವದು
ತಲೆಯ ಹೊಕ್ಕುತಿನ್ನುತ್ತಿದೆ
ನಿರಾಯಾಸದೆ ತನುವ
ಕೊಂದು ಮುಂದೋಗುತ್ತಿದೆ..!!
.
ಅನಕ್ಷರಸ್ಥನವ ಮತಿಹೀನ
ಅನಕ್ಷರಸ್ಥನವ ಮತಿಹೀನ
ಸ್ವಚ್ಛತೆ ಮರೆತು ಸಾಯುತಿರೇ
ಉಳಿಸಲೆತ್ನಿಸಿದ ದೈವನವ
ಬಿಮ್ಮನೆ ಕುಳಿತು ನಗುತಲಿರೆ..!!
ಮದುವೆಗೋ ಮಸಣಕೋ ಈ ತನುವು..!!??!!.
-ಗೋವಿಂದ್ ರಾಜು ಬಿ.ವಿ.ಗೌಡ
ಹಲವು ಅಕ್ಷರಸ್ಥರೂ ಮತಿಹೀನರಂತೆ ತೋರುತಿಹರು
ಇಂದು ಜಾಗೃತೆ ಮಾಡಿ ಬದುಕಿ ಉಳಿದರೆ ನಾಳೆ ಸಂಭ್ರಮಿಸಬಹುದು, ಮದುವೆ, ಉತ್ಸವಗಳ ಸಂಭ್ರಮ,
ಅದಲ್ಲದೆ ಎಗ್ಗು ಸಿಗ್ಗಿಲ್ಲದೆ
ಉದ್ದಟತನ ತೋರಿದಲ್ಲಿ
ಕೈ ಬೀಸಿ ಕರೆಯಬಹುದು ಮಸಣ.
ಪ್ರಸ್ತುತ ಪರಿಸ್ಥಿತಿಯ ಅನಾವರಣ, ಚೆನ್ನಾಗಿದೆ ಕವಿತೆ.
ಬಂದ ಸಂಕಷ್ಟವು ಜಾಗೃತಿಯಿಂದಲೇ ಉಪಶಮನ…ಚೆನ್ನಾಗಿದೆ ಕವನ.