ಕವಿತೆ ಹುಟ್ಟಿದ ಸಮಯ
“ಮನದಲ್ಲಿ ಭಾವ ಮೂಡುವಷ್ಟು ದಿನ,
ನಾ ಗೀಚುವ ಈ ಕವನ,
ನಾಳೆ ಎಲ್ಲಿ, ಹೇಗೆಂದು ಈ ಜೀವನ,
ಅರಿಯದಷ್ಟು ನಿಗೂಢ ಪಯಣ”.
“ಸ್ಪುರಿಸುವಷ್ಟು ದಿನ ಹೃನ್ಮನದಲ್ಲಿ ಭಾವದೊರತೆ,
ಸಾಗುವೆ ನಾ ಎಲ್ಲೂ ನಿಲ್ಲದೇ,
ಓಡಲಾರೆ ಯಾವುದೇ ಹೊಗಳಿಕೆಯ ಹಿಂದೆ,
ಇಲ್ಲ ಪ್ರತಿಷ್ಠೆ, ಯಶಸ್ಸಿನ ಚಿಂತೆ”.
“ಖಾಲಿ ಹಾಳೆಯ ಮೇಲೆ ಮೂಡಿದಾ ಕ್ಷಣ,
ಮನದೆಲ್ಲಾ ಭಾವನೆ ಅನಾವರಣ,
ನಿರಾಳವಾದ ಅನುಭವ ಈ ಮನ,
ಜೊತೆಗೆ ಮನಸ್ಸು ತವಕಿಸುವ ಹಕ್ಕಿಯಂತೆ ಮುಟ್ಟಲು ಉದ್ದಗಲದ ಬಾನ”.
“ಅರಿಯದೇ ಮೂಡೋ ಸಾಲುಗಳು ಬೆಸೆವ ಗೆಳೆತನ,
ಇದಲ್ಲದೆ ಬೇರಿನ್ನೇನು ಸುಂದರ ಜೀವನ?,
ಮನದ ಭಾವನೆಗಳೆಲ್ಲ ಪರಸ್ಪರ ವಿನಿಮಯಗೊಂಡಾಕ್ಷಣ,
ಬೆಸೆಯುವುದು ಅರಿವಿಲ್ಲದೆಯೇ ಒಂದು ಸುಂದರ ನವಿರಾದ ಬಂಧನ “.
“ಈ ಸಾಲುಗಳು ಸೃಷ್ಟಿಸುವ ಕವಿತೆಯೆಂಬ ಸುಂದರ ಲೋಕ,
ಕಟ್ಟಿಕೊಡುವುದು ನವಿರಾದ ಸ್ನೇಹಲೋಕ,
ಕೈ ಹಿಡಿದಂದಿನಿಂದ ಈ ಅಕ್ಷರಗಳ ಲೋಕ,
ನಾ ಸವಿಯ ತೊಡಗಿಹೆನು ಬದುಕ”.
“ಮನದೆಲ್ಲಾ ದುಗುಡ,
ಹಾಳೆಯ ಮೇಲಾಯಿತು ಮಳೆಯಾಗಿ ಸುರಿವ ಕಾರ್ಮೋಡ,
ಅದೇನು ನಂಟೋ ಅರಿಯೇ ಈ ಸಾಲುಗಳ ಸಂಗಡ,
ನಿವಾರಿಸಿ ತಿಳಿಯಾಗಿಸುವುದು ಕಾಗದದ ಮೇಲೆ ಮೂಡಿ ಗೊಂದಲದ ಗೂಡ”.
– ನಯನ ಬಜಕೂಡ್ಲು
ಸುಂದರ ಕವಿತೆಯ ಸಾಲುಗಳು ,ಜೀವನದಲ್ಲಿ ಇನ್ನು ಹೇಗೆ ಎಂಬ ತವಕ .ನಯನ ನೀವುಬರೆದ ಕವಿತೆ .ಸುಂದರ
ಧನ್ಯವಾದಗಳು ಅಮ್ಮ
ಕವನದ ಬಗ್ಗೆ ಕವನ..ಸೂಪರ್!
Thank you Hemakka
ನಯನಾರವರ ಕವನದ ಬಗೆಗಿನ ನವಿರಾದ ಕವನ ಮನವನ್ನು ಮುದಗೊಳಿಸಿತು.