ಆಧುನಿಕ ರೋಗಗಳು…
ಹಿಂದೊಂದು ಕಾಲವಿತ್ತು ಜನರಿಗೆ, ಜಾನುವಾರುಗಳಿಗೆ ಏನಾದರೂ ಅಂಟು ರೋಗ ರುಜಿನಗಳು ಬಂದರೆ ಸಾಕು ಇಡೀ ಊರಿಗೆ ಊರೇ ಸ್ಮಶಾನ ಭೂಮಿಯಾಗುತ್ತಿತ್ತು. ಕಾಲ ಬದಲಾದಂತೆ ವಿಜ್ಞಾನದಲ್ಲಾದ ವೈಜ್ಞಾನಿಕ ಆವಿಷ್ಕಾರಗಳಿಂದ ಸಾಂಕ್ರಾಮಿಕ ರೋಗಗಳಾಗಿದ್ದ ಕಾಲರ, ಡೆಂಗ್ಯೂ, ಸಿಡುಬು, ಮುಂತಾದ ರೋಗಗಳು ಕಣ್ಮರೆಯಾಗ ತೊಡಗಿದವು. ಪ್ರಕೃತಿಯು ತನ್ನ ಸಮತೋಲನವನ್ನು ನೈಸರ್ಗಿಕ ವಿಕೋಪಗಳ (ಭೂಕಂಪ, ಸುನಾಮಿ, ಜ್ವಾಲಾಮುಖಿ, ಅತಿವೃಷ್ಟಿ, ಅನಾವೃಷ್ಟಿ, ಬರಗಾಲ, ಪ್ರವಾಹ, ಚಂಡಮಾರುತಗಳು) ಮೂಲಕ ಕಾಯ್ದುಕೊಳ್ಳುವುದನ್ನು ನೋಡಿದ್ದೇವೆ.
ಜಗದ ಸಮಸ್ತ ಜೀವರಾಶಿಗಳಲ್ಲಿಯೇ ಮಾನವನೇ ಬುದ್ಧಿ ಜೀವಿಯು. ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಈಗಿನ ಕಾಲಘಟ್ಟದಲ್ಲಿದ್ದಾನೆ. ಪ್ರಕೃತಿಯೂ ಮನುಷ್ಯನ ಆಸೆಗಳನ್ನು ಪೂರೈಸಬಹುದೇ ವಿನಾಃ ದುರಾಸೆಗಳನ್ನಲ್ಲ ಎಂಬುವ ಸತ್ಯವನ್ನು ಮರೆತಿದ್ದಾನೆ. ಪ್ರಕೃತಿಯನ್ನು ವಿಕೃತಿಗೊಳಿಸಿದ ಪಾಪದ ಫಲವನ್ನು ಆಧುನಿಕ ರೋಗಗಳ ಮೂಲಕ ತಾನೇ ಅನುಭವಿಸುತ್ತಿದ್ದಾನೆ.
ಸೂಕ್ಷ್ಮಾಣು ಜೀವಿಗಳ (ವೈರಸ್) ಮೂಲಕ ಹರಡುವಂತಹ ಭಯಾನಕ ರೋಗಗಳಾದ ಸಾರ್ಸು, ಎಬೋಲ, ಹೆಚ್ 1ಎನ್ 1 ರೋಗಗಳು ಸಹ ವಿಜ್ಞಾನಿಗಳ ಅವಿರತ ಸಂಶೋಧನೆಯ ಫಲದಿಂದ ಹತೋಟಿಗೆ ಬಂದಿವೆ. ಆದರೆ ಇತ್ತೀಚೆಗೆ ನೂರಕ್ಕೂ ಅಧಿಕ ರಾಷ್ಟ್ರಗಳ ಜನರನ್ನು ತನ್ನ ಹೆಸರಿಂದಲೇ ಭಯಭೀತರಾಗಿಸಿರುವ ರೋಗವಾದ ಕೋರೋನ(ಕೋವಿಡಾ 19)ವು ಸೂಕ್ತ ಚಿಕಿತ್ಸೆಯ ಔಷಧಿಗಳಿಲ್ಲದೇ ಸಾವಿರಾರು ಜನರಿಗೆ ಮರಣ ಮೃದಂಗ ಬಾರಿಸಿದೆ. ಕೆಲವು ರೋಗಗಳು ಪಿತ್ರಾರ್ಜಿತವಾದರೆ, ಮತ್ತೆ ಕೆಲವು ರೋಗಗಳು ಸ್ವಯಾರ್ಜಿತಗಳಾಗಿವೆ.
ಈಗ ಮನುಕುಲವನ್ನೇ ಬೆಚ್ಚಿಬೀಳಿಸಿರುವ ಆಧುನಿಕ ರೋಗಗಳು ಹರಡುವಿಕೆಯು ಹೆಚ್ಚಾಗಲು ನಮ್ಮ ಜನರಲ್ಲಿರುವ ಸ್ವಚ್ಛತೆಯ ಅರಿವಿನ ಕೊರತೆ, ಮಾನಸಿಕ ದೌರ್ಬಲ್ಯ, ರೋಗಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಯದೇ ಪೂರ್ವಗ್ರಹ ಪೀಡಿತರಾಗಿ ಸಮೂಹ ಮಾಧ್ಯಮಗಳು ಬಿಂಬಿಸುವ ಸುದ್ದಿಗಳನ್ನು , ಮೌಢ್ಯತೆಯಿಂದ ಜ್ಯೋತಿಷಿಗಳ ಮಾತುಗಳನ್ನು ನಂಬುವುದು, ಜನರ ಕಲ್ಪಿತ ವದಂತಿಗಳನ್ನೇ ಸತ್ಯವೆಂದು ಭಾವಿಸುವುದು.
ಇದರ ಜೊತೆಗೆ ತಮಗೆ ಬಂದಿರುವ ಮಾರಕ ಖಾಯಿಲೆಯಿಂದ ಸಾವಿನ ಬಾಗಿಲ ಬಳಿಯಿರುವ ಕೆಲವು ವಿಕೃತ ಮನಸ್ಸಿನವರು ಸಹ ತಮ್ಮೊಡನೆ ಹತ್ತಾರು ಮಂದಿಗಳು ಸಾಯಲೆಂದು ರೋಗಾಣುಗಳು ಹರಡುತ್ತ ಸಾವಿರಾರು ಅಮಾಯಕ ಜನರನ್ನು ಬಲಿಪಶುಗಳಾಗಿಸಿರುವುದು ಶೋಚನೀಯ ಸಂಗತಿಯಾಗಿದೆ.
ಇನ್ನು ಮುಂದೆಯಾದರೂ ಸಹ ಮಾನವರು ಪ್ರಕೃತಿಯನ್ನು ವಿಕೃತಗೊಳಸದೇ, ಸಹಜ ಜೀವನ, ನಿಯಮಿತ ವ್ಯಾಯಾಮ, ಪೌಷ್ಟಿಕ ಹಾಗೂ ಪರಿಶುದ್ಧ ಆಹಾರ ಸೇವನೆ, ಪರಿಸರ ರಕ್ಷಣೆ, ಸಾಮಾಜಿಕ ಸ್ವಚ್ಛತೆ, ಮುಂಜಾಗ್ರತಾ ರೋಗ ನಿಯಂತ್ರಣ ಕ್ರಮಗಳು, ನಿಯಮಗಳ ಪಾಲನೆ ಮೂಲಕ ಆಧುನಿಕ ರೋಗಗಳನ್ನು ತಡೆಗಟ್ಟಬಹುದು.
– ಶಿವಮೂರ್ತಿ ಹೆಚ್ , ದಾವಣಗೆರೆ.
ನಿಜ, ಕರೋನಾ ಹಬ್ಬದಂತೆ ನಮ್ಮ ಎಚ್ಚರದಲ್ಲಿ ನಾವಿರಬೇಕು. ಸಕಾಲಿಕ ಬರಹ.
ಧನ್ಯವಾದಗಳು ಮೇಡಂ. ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ
ನಿಜ, ಸ್ವಚ್ಛತೆಯ ಕೊರತೆಯೇ ರೋಗಗಳು ಹುಟ್ಟಿಕೊಳ್ಳಲು, ಹರಡಲು ಕಾರಣ. ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆ ಆಗುವ ಬರಹ.
ಧನ್ಯವಾದಗಳು ಮೇಡಂ
ಸುಂದರ ಪ್ರಕೃತಿಯನ್ನು ಹಾಳುಗೆಡವುತ್ತಿರುವ ಧೂರ್ತ ಮಾನವರಿಗೆ ಇನ್ನಾದರೂ ಬುದ್ಧಿ ಬರುವುದೇನೋ..ಸಕಾಲಿಕ ಬರಹ.
ಧನ್ಯವಾದಗಳು ಮೇಡಂ ನಾನು
It’s really true precautions is better than cure
ಧನ್ಯವಾದಗಳು ಸರ್
writing about karona virus ಸರ್
ಧನ್ಯವಾದಗಳು ಮೇಡಂ
ಸೂಪರ್ Shivu
ಧನ್ಯವಾದಗಳು ಕ್ರೇಜಿಸ್ಟಾರ್ ರವಿಚಂದ್ರನ್
ಉತ್ತಮ ಲೇಖನ ಸರ್ ಅಭಿನಂದನೆಗಳು
ಧನ್ಯವಾದಗಳು
Good sir, presentation is very important you have written it in a correct way.
ಧನ್ಯವಾದಗಳು ಮೇಡಂ
ಭಯಾನಕ ಮನಕುಲವನ್ನೆ ಬೆಚ್ಚಿಬೀಳಿಸುವ ರೋಗ .ಹೌದು ..ನಾವು ಇದನ್ನು ತಡೆಕಟ್ಟಲು ಸಹಕರಿಸೋಣ .ಉತ್ತಮಲೇಖನ .
ಧನ್ಯವಾದಗಳು ಮೇಡಂ
ಮಾನಸಿಕ ನೈರ್ಮಲ್ಯ ಪರಿಸರ ನೈರ್ಮಲ್ಯ ಈ ಎರಡೂ ನೈರ್ಮಲ್ಯಗಳ ಅತ್ಯಾವಶ್ಯಕತೆಯಿದೆ ಇದ್ದೇ ಇದೆ ಇರಲೇಬೇಕಿದೆ ನಮ್ಮೀ ಮಾನವ ಲೋಕಕ್ಕೆ..… ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ ಕರ್ನಾಟಕ ರಾಜ್ಯ ಭಾರತ ದೇಶ.
ಧನ್ಯವಾದಗಳು ಸರ್
ರೋಗಗಳ ನಿಯಂತ್ರಣಕ್ಕೆ ನೈರ್ಮಲ್ಯವೇ ಸಿದ್ಧ ಔಷಧ ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.