ಬೆಳಕು-ಬಳ್ಳಿ

ಎಚ್ಚರ ಹೆಣ್ಣೆ..!

Share Button

ನಾರಿ ನಿನಗೂ ಸಮಾನ ಹಕ್ಕಿದೆ
ಬದುಕಿನ ಆಯ್ಕೆ ಮುಕ್ತವಾಗಿದೆ
ಜಾರಿ ಬಿಳಿಸೊ ಜನರ ನಡುವೆ
ನೀನಿಡು ಎಚ್ಚರದಿ ಸಜ್ಜನದ ಹೆಜ್ಜೆ,
.
ಭಕ್ಷಣೆ ಭರದಲಿ ಈ ಜಗ ನುಗ್ಗಿದೆ
ರಕ್ಷಿಸೋ ಕೈಗಳು ಕುಕ್ಕಿ ತಿನ್ನುತ್ತಿವೆ
ಶೋಷಣೆ ಹಿಂಸೆಗಳಿಲ್ಲಿ ಸಾಮಾನ್ಯವು
ಮೆಟ್ಟು ಇದನೆಲ್ಲವ ನೀ ಅಸಾಮಾನ್ಯಳು
.
ಬಿಡುಗಡೆ ಸಿಕ್ಕಿದೆ  ನಿಲುಗಡೆಯಿಲ್ಲದೆ
ಲಘುಲಘು ಮುನ್ನಡೆ ನಿನಗಾಗದು ಹಿನ್ನೆಡೆ
ಜಗವೇ ಹೊಗಳುವ  ಧೈರ್ಯವು ನಿನ್ನದೆ
ಬಗೆಬಗೆ ಬದುಕಿದೆ ಕುಗ್ಗದೆ ನೀ ನೆಡೆ
.
ಬಂಧನದ ಬಾಳು ಇನ್ನಿಲ್ಲವಾಗಿದೆ
ಬಯಕೆಯ ಬಾಗಿಲು ತಾನೇ ತೆರೆದಿದೆ
ಬಯಸಿದ ಬದುಕು ನಿಂಗಾಗಿ ಕಾದಿದೆ
ಬಣ್ಣಿಸಲಸದಳವಾಗಲಿ ಹೆಣ್ಣೇಕೆನ್ನುವಗೆ
.
ಎಚ್ಚರ ಹೆಣ್ಣೆ! ಸ್ವಚ್ಛದಿ ಬಾಳಲು ಪೀಡರು ಬಿಡರು
ಬದುಕಲಿ ಸಿಗಲಿವೆ ಸಾವಿರ ಎಡರು ತೊಡರು
ಮೆಟ್ಟುತ್ತ ಮುನ್ನಡೆ ನೀ, ಶಕ್ತಿಯು  ಹೆಣ್ಣು
ಜಗಜಟ್ಟಿಯು ನೀ, ಮನುಕುಲದ ಕಣ್ಣು

.

-ಶಿವಾನಂದ್ ಕರೂರ್ ಮಠ್, ದಾವಣಗೆರೆ.

4 Comments on “ಎಚ್ಚರ ಹೆಣ್ಣೆ..!

  1. ಹೆಣ್ಣಿನ ಸಾಮಾಜಿಕ ಕ್ರಾಂತಿಯ ಹಕ್ಕಿಗೆ ಮನ್ನಣೆ ಸಿಗಲಿ……..Nice

  2. Superb. ಹೆಣ್ಣುಮಕ್ಕಳು ಮಕ್ಕಳಲ್ಲಿ ಎಲ್ಲವನ್ನೂ ಸಾಧಿಸ ಬಲ್ಲೆ ಅನ್ನುವ ಸ್ಫೂರ್ತಿ ತುಂಬುವ ಸಾಲುಗಳು.

  3. ಇಂತಹ ಕವನಗಳು ಹೆಣ್ಮಕ್ಕಳಿಗೆ ಧೈರ್ಯ ತುಂಬುವ ಟಾನಿಕ್ ಇದ್ದಂತೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *