ಸಾರ್ಥಕತೆ
*ಅ* ವನಾಡಿಸಿದಂತೆ ಬಾಳಿನ
*ಆ* ಟವನು ಆಡಲೇಬೇಕು
*ಇ *ರುವರೆಗೂ ಇಹಲೋಕದಿ
*ಈ* ಶ್ವರನ ನಂಬಲೇಬೇಕು
*ಉ* ತ್ತರವೇ ಸಿಗದ ಜೀವನದಲ್ಲಿ
*ಊ *ಟ ಬಟ್ಟೆಗೆ ದುಡಿಯಬೇಕು
*ಋ* ಣತ್ರಯಗಳ ತಿಳಿದು ತೀರಿಸಲು
*ಎ* ಲ್ಲರೊಳಗೊಂದಾಗಿ ಬಾಳಬೇಕು
*ಏ *ರುಪೇರುಗಳು *ಏ* ನೇಯಾದರು
*ಐ* ಹಿಕ ಸುಖದುಃಖ ಅನುಭವಿಸಬೇಕು
*ಒ *ಲವ ಬಿತ್ತಿ ಒಲವ ಬೆಳೆಯುತ ನಾವು
*ಓ* ರೆಕೋರೆಯ ಕಳೆಗಳನ್ನು ಕೀಳಬೇಕು.
*ಔ *ದಾರ್ಯ ಮನೋಭಾವ ಹೊಂದುತ
*ಅಂ* ದುಕೊಂಡಂತೆ ಜೀವನ ನಡೆಸದೆ
*ಅಃ *ಹೊಂದಿಕೊಂಡು ಸಹಬಾಳ್ವೆ ತತ್ವದಿಂದ
ಅವನಿಯೊಳು ಸಾರ್ಥಕತೆಯಿಂದ ಬಾಳಬೇಕು.
– ಶಿವಮೂರ್ತಿ.ಹೆಚ್ , ದಾವಣಗೆರೆ.
ಅರ್ಥಪೂರ್ಣ ವಿಶೇಷ ಕವನ
ತುಂಬು ಹೃದಯದ ಧನ್ಯವಾದಗಳು ಸರ್
ಅಕ್ಷರಮಾಲೆಯ ಕವನ..ಸೊಗಸಾಗಿದೆ
ತುಂಬು ಹೃದಯದ ಧನ್ಯವಾದಗಳು ಮೇಡಂ. ನಿಮ್ಮ ಸಹೃದಯ ಪ್ರೋತ್ಸಾಹ ಸದಾ ಹೀಗೇ ಇರಲಿ ಮೇಡಂ
Excellent. ಸ್ವರಾಕ್ಷರಗಳಿಂದ ಸುಂದರವಾದ ಬದುಕಿನ ಪಾಠ.
ತುಂಬು ಹೃದಯದ ಧನ್ಯವಾದಗಳು ಮೇಡಂ
ಅಕ್ಷರ ಮಾಲೆಯಲ್ಲಿ ಬದುಕಿನ ಪೂರ್ಣ ಪಾಠವನ್ನು ಸೊಗಸಾಗಿ ವಿಶದಪಡಿಸಿರುವಿರಿ, ಧನ್ಯವಾದಗಳು.
ತುಂಬು ಹೃದಯದ ಧನ್ಯವಾದಗಳು ಮೇಡಂ