ಮನುಷ್ಯನ ದುರಾಸೆ
ಹೊಟ್ಟೆಯ ಹಿಟ್ಟು ಕಸಿಯುತಿದೆ
ಆಧುನಿಕತೆಯ ಕರಿನೆರಳು.
ಹಸಿವಿನ ಧ್ಯಾನದಲಿ ಮಗ್ನರಾಗಿಹರು
ಆಫ್ರಿಕಾದ ಕಾಡಿನ ಮೃಗಗಳು
ಹಣದ ಆಸೆಯ ಹಿಂದೆ ಮನುಷ್ಯನ
ಮುಗಿಯದ ಪಯಣ
ದಿಕ್ಕು ದಿಕ್ಕುಗಳಲ್ಲಿ ಕಂಗೆಟ್ಟಿವೆ
ಕಾಡಿನ ಮುಗ್ಧ ಪ್ರಾಣಿಯ ಹನನ
ನೀರು ಗಾಳಿ ನೆಲವನು ಕಬಳಿಸಿದ
ಮನುಷ್ಯನ ಅತಿ ಆಸೆಯಕೆಚ್ಚು
ನಿರ್ಮಿಸಿದ ದಶದಿಕ್ಕುಗಳಲಿ
ವನ್ಯಜೀವಿಯ ಜೀವಕ್ಕೇ ಕಾಡ್ಗಿಚ್ಚು
ರಾಸಾಯನಿಕದ ಅಕ್ಷಯ ಪಾತ್ರೆ
ಕೊನೆಗೂ ಮೂಡಿಸಿದ
ಜಲಚರಗಳ ಜೀವನದ
ಕೊನೆಯ ಯಾತ್ರೆ
ಪ್ಲಾಸ್ಟಿಕ್ಕಿನಕ್ನ ರಾಶಿ ರಾಶಿಯ ಸೃಷ್ಟಿ
ಮರುಗುತಿವೆ ವನ್ಯಜೀವದ ಆಸ್ತಿ
ರಾಸಾಯನಿಕವ ಬಿತ್ತಿ ಸಸ್ಯದ ಸೃಷ್ಟಿ
ಅಸ್ಪತ್ರೆಯಲಿ ನರಳುತಿವೆ
ಜೀವನದ ಕೊನೆಯ ದಿನಗಳ ಆತ್ಮದ ದೃಷ್ಟಿ.
ನಗರವೆಂಬ ಕ್ಷಣಿಕ ಸ್ವರ್ಗದ ಸೃಷ್ಟಿ
ಬದುಕಿನ ಕೊನೆಗಳಿಗೆಗೆ ದಿವ್ಯದೃಷ್ಟಿ
ಎಂದೂ ಕೊನೆ ಮನುಷ್ಯನ
ದುರಾಸೆಯ ಲೋಕಕೆ
-ರಾಘವ ರಾವ್
ನಮಸ್ಕಾರ ಸರ್.ಮನುಷ್ಯನ ದುರಾಸೆ ಕುರಿತಾದ ತಮ್ಮ ಕವನ ತುಂಬಾ ಅಥ೯ಪುಣ೯ವಾಗಿತ್ತು.ಧನ್ಯವಾದಗಳು
Thank you. Howdu namma duraseya parinama mugda pranigala hanana
Thank you madam.
Thumba chennagide
ಉತ್ತಮ ಸಂದೇಶವನ್ನು ನೀಡುವ ಕವನ. ನಿಜ ಸರ್, ಪ್ಲಾಸ್ಟಿಕ್ ನ ಸೃಷ್ಟಿ ಯಂತೂ ಆಗಿದೆ ಆದರೆ ಅದರಿಂದ ಮುಕ್ತಿಯ ಮಾರ್ಗ ಮಾತ್ರ ಕಾಣುತ್ತಿಲ್ಲ.
Thank you Nayanaji. Nija plastic mukha pranigala baduku kasidukondide
ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿರಿಸಿಕೊಂಡ ಪ್ಲಾಸ್ಟಿಕ್ ನಿಂದ ಪಾರಾಗುವ ದಾರಿ ಎಲ್ಲಿದೆ???..ಸಕಾಲಿಕ ಸಮಸ್ಯೆಯ ಕವನ ಚೆನ್ನಾಗಿದೆ.