‘ಆಗದು’
ಒಂದು ಸುಸ್ತಾದ ಇರುಳು
ಶಪಥ ಮಾಡುತ್ತೇನೆ ಇನ್ನಾಗದು
ನನಗೆಂದು… ಮುನ್ನಿನಂತೆ
ಗಾಣದ ಎತ್ತಾಗಲು.
ಮತ್ತೆ ಮಾರನೆಯ ಅನವರತ
ಗಡಿಬಿಡಿಗೆ ಮೈಗೊಟ್ಟು, ಮನ
ಕೆಟ್ಟು ಸ್ವಸ್ಥವಿಲ್ಲದೆ ಬಾಳುಗೆಡಲು,
ಬಿಡುವಿಲ್ಲದ ಈ ದುಡಿಮೆ, ಎಂದಿಗೂ
ಮುಗಿಯದ ರಾಮಾಯಣ-ಭಾರತವೇ ಆಗಿರುವಾಗಲೂ; ಅಂತೂ ಯಾವ
ಪಾತ್ರ ಧರಿಸಲೂ ನನಗೆ ಇಚ್ಛೆಯಾಗದು.
ಮುಂದೇನು.? ಮತ್ತೇನು.? ಇನ್ನೇನು.?
ಎಂಬ ನಿತ್ಯ ಕಾಡುವ ಉತ್ತರ ಸಿಗದ
ಪ್ರಶ್ನೆಗಳಿಗೆ ಕವಡೆ ಶಾಸ್ತ್ರದ ಸಮಾಧಾನವೂ
ನನಗೆ ಹಿತವೆನಿಸದು…..
ಹೀಗಿಂತಿರುವಾಗ, ಸುಡುಬತ್ತಿಗೆ
ತುತ್ತಾದ ಎಣ್ಣೆಯಂತೆ, ದಿನಮಾನ
ದೊಡ್ಡ ಉರಿಯಲಿ ಉರಿದು-
ಜೀವಮಾನ ಸುಡುಸುಡುತ್ತಾ, ಕರಗಿದ
ಬೆಳಕಿನೆಳೆಗಳನು; ಕತ್ತಲಲಿ ಅರಸಿ
ಕೊರಗುವುದು ಇನ್ನು ಎಂದಿಗೂ
ನನಗಾಗದು…
– ವಸುಂಧರಾ ಕದಲೂರು.
“ಹೆಣ್ಣೆಂದರೆ ದೀಪ,
ನೀಡುವವಳು ಮನೆ, ಸಂಸಾರಕ್ಕೊಂದು ರೂಪ,
ಕಂಗೆಟ್ಟಾಗ ಒಮ್ಮೆ ಆವರಿಸಿದರೂ ಕೋಪ,
ತನ್ನವರಿಗಾಗಿ ಮತ್ತೆ ಎದ್ದು ತೋರುವವಳು ಬಾಳ ಬಂಡಿಯ ಎಳೆಯೋ ಪ್ರತಾಪ “.
Very beautiful poem madam ji.
ಹೆಣ್ಣಿನ ಭಾವನೆಗಳನ್ನು ಗಟ್ಟಿಯಾಗಿ ಕಟ್ಟಿಕೊಟ್ಟ ಸುಂದರ ಕವನ.