ಗಜಲ್ : ಕತ್ತಲ ಬಾಳಿಗೆ ಬೆಳಕು
.
ಕತ್ತಲ ಬಾಳಿಗೆ ಬೆಳಕು ನೀಡಿದ ಹಾಜಬ್ಬ
ಬಿತ್ತಲು ಕಾಳನು ತಮವ ಕಳೆದ ಹಾಜಬ್ಬ
ಕಿತ್ತಳೆ ಹಣ್ಣನು ಮಾರುತ ನಿಸ್ವಾರ್ಥ ಜೀವನ
ಸಾಗಿಸಿ ಶಾಲೆಯ ಉದ್ದಾರ ಮಾಡಿದ ಹಾಜಬ್ಬ
ಅಕ್ಷರ ಮಹತ್ವ ತಿಳಿದು ಗುರುವು ಇಲ್ಲದೆ
ಗುರಿಯ ತಲುಪಿ ಪದ್ಮಶ್ರೀ ಪಡೆದ ಹಾಜಬ್ಬ
ಹಣದ ಆಸೆಯ ಇರದೆ ಶಾಲೆಗೆ ದೇಣಿಗೆ
ನೀಡುತ ಮಕ್ಕಳ ಬದುಕ ಕಟ್ಟಿದ ಹಾಜಬ್ಬ
ವರ್ಣಿಸಿ ಬರೆದ ಶಂಕರ ನಿನ್ನಯ ಕಬ್ಬವ
ಪ್ರಶಸ್ತಿ ಬಯಕೆ ಎಳ್ಳಷ್ಟು ಇಡದ ಹಾಜಬ್ಬ
(ಪದ್ಮಶ್ರೀ ಪುರಸ್ಕೃತ. ಹರೇಕಳದ ಹಾಜಬ್ಬನ ಕುರಿತು)
-ಶಂಕರಾನಂದ ಹೆಬ್ಬಾಳ , ಇಲಕಲ್ಲ
Nice. ಒಬ್ಬ ಸೀದಾ ಸಾದಾ ವ್ಯಕ್ತಿಯ ವ್ಯಕ್ತಿತ್ವದ ಚಿತ್ರಣ ನೀಡುವ ಸಾಲುಗಳು.
ಸರಳ ವ್ಯಕ್ತಿಯ ದೊಡ್ಡ ಕೆಲಸ…ಹಾಜಬ್ಬನವರಿಗೆ ಹೇಟ್ಸ್ ಆಫ್. ಸೊಗಸಾಗಿದೆ ಗಝಲ್.