ಪ್ರೀತಿಗೂಡು
.
ಹಗಲಿರುಳು ಎಡಬಿಡದೆ
ಕಣ್ಣರಳಿಸಿ ನೋಡಿದರೂ…
ನನ್ನೊಳಗೆ ನನ್ನ ಹುಡುಕುವ
ಕನ್ನಡಿಯ ಬಿಂಬದಲ್ಲೂ…
ಅರಳಿದ್ದು ಏನೆಂದುಕೊಂಡೆ..?
.
ಆಕಾಶದಲ್ಲೂ ನಿನ್ನದೇ
ಆಕಾಶದಲ್ಲೂ ನಿನ್ನದೇ
ಹೆಜ್ಜೆ ಗುರುತುಗಳ ಛಾಯೆ…!
ಕರಿಬಿಳಿಯ ಮೋಡಗಳ
ಬೆರಕೆಯಲ್ಲೂ
ನಿನ್ನ ಮೊಗದ ಮಾಯೆ…
.
ಹೇಳು ನೀ ಯಾಕಾದೆ ದೂರ…
ಹೇಳು ನೀ ಯಾಕಾದೆ ದೂರ…
ಪ್ರೀತಿ ಭಾವನೆಯಾಯೀತೆ ಭಾರ?
ನೂಕಿ ಮನದ ಕಹಿಯನು
ಎಳೆಯೋಣ ಪ್ರೀತಿ ತೇರು
ಸವಿನೆನಪು ಮೆಲುಕು ಹಾಕಿ
ಮೊಗವ ತೋರು
.
ಹೇಳಿಬಿಡು ಒಮ್ಮೆಯಾದರೂ
ಹೇಳಿಬಿಡು ಒಮ್ಮೆಯಾದರೂ
ನೀ ಬರುವೆ ಯಾವತ್ತು?
ಬಲಿತಿದೆ ಪ್ರೀತಿಗೂಡು
ಬರದಿರಲಿ ಆಪತ್ತು.
.
– ಶಿವಾನಂದ್ ಕರೂರ್ ಮಠ್ , ದಾವಣಗೆರೆ.
“ಬಣ್ಣ ಬಣ್ಣದ ಕಲ್ಪನೆ,
ತುಸು ನಲಿವು, ತುಸು ವೇದನೆ,
ಬಣ್ಣನೆಗಿಲ್ಲ ಕೊನೆ,
ಈ ಪ್ರೀತಿಯೆಂದರೆ ಹಾಗೇನೇ”.
Nice one sir
ನಿಜ
ಚಂದದ ಕವನ.