ನಡೆದ ದಾರಿ
ಬಾಲ್ಯದ ಆಟ ,ಹುಡುಗಾಟ ,
ಹಕ್ಕಿಯಂತೆ ಬಾನಗಲ ಸ್ವಚ್ಛಂದ ಹಾರಾಟ ,
ಅರ್ಥವಾಗುವ ಮುನ್ನವೇ ಇಲ್ಲಿನ ಪಾಠ ,
ಬದುಕು ಹೊಸ ತಿರುವು ಪಡೆದಿತ್ತು
ಮುಂದಿತ್ತು ಯೌವನದ ಹೊಸ್ತಿಲು ,
ಅಲ್ಲೋ ನೂರಾರು ಕವಲು,
ಗೊಂದಲಗಳು ದೂರವಾಗಿ ಬೆಳಗುವ ಹೊತ್ತಿಗೆ
ಸಾಗೋ ಹಾದಿಯಲ್ಲಿ ಕಂದೀಲು
ಬದುಕು ಹೊಸ ತಿರುವು ಪಡೆದಿತ್ತು
ಚಾಚಿದ್ದ ಸ್ನೇಹ ಹಸ್ತಗಳು ಹಲವಾರು ,
ಸಿಂಗರಿಸಿದ ಅನುಭವ ಬದುಕೆಂಬ ಬಣ್ಣದ ತೇರು,
ಅರಿಯುವ ಮೊದಲೇ ಭಾವನೆಗಳ ನವಿರು,
ಬದುಕು ಹೊಸ ತಿರುವು ಪಡೆದಿತ್ತು
ಕಾದಿತ್ತು ಹೊಸ ಹಾದಿಯ ತೋರುತ್ತಾ ಜೀವನ ,
ಇಲ್ಲಿತ್ತು ಹೃದಯಗಳ ಬೆಸುಗೆ, ಮನಸ್ಸುಗಳ ಬಂಧನ,
ಗಾಢವಾಗಿ ಹಬ್ಬುವ ವೇಳೆಗೆ ಈ ಬಣ್ಣ ,
ಬದುಕು ಹೊಸ ತಿರುವು ಪಡೆದಿತ್ತು
ಅನಿರೀಕ್ಷಿತಗಳ ಸರಮಾಲೆ ಈ ಬದುಕು ,
ಸರಿದ ಕಾಲವಿಲ್ಲಿ ಬರೀ ನೆನಪು,
ಪ್ರತಿ ಆಯಾಮವ ಮನಬಿಚ್ಚಿ ಸ್ವೀಕರಿಸಿದಾಗಲೇ ಹಬ್ಬುವುದಿಲ್ಲಿ ಕಂಪು,
ನಗು ನಗುತ್ತಾ ಅನುಭವಿಸು ಮನವೆ ಪ್ರತಿ ಕ್ಷಣವ ನೀ ಇಲ್ಲಿ
ಬದುಕು ಪಡೆಯುವ ಮುನ್ನವೇ ಮತ್ತೊಂದು ಹೊಸ ತಿರುವು
– ನಯನ ಬಜಕೂಡ್ಲು
ನಯನಕ್ಕ “ನಡೆದ ಹಾದಿಯ” ಕುರಿತು ಏನೋ ಕತೆ ಇರಬಹುದೆಂದು ನೋಡಿದರೆ ನಾವೆಲ್ಲರೂ ನಡೆದ ನಡೆಯುತ್ತಿರುವ ಹಾದಿಯನ್ನೇ ನಮ್ಮ ಮುಂದಿರಿಸಿದ್ದಾರೆ
Thank you sir
ಸುಪರ್ ಕವನದಸಾಲು .ಬಾಲ್ಯವೇ ನಮ್ಮ ಸುಖದ .ಕಾಲ ಸೊಗಸಾಗಿದೆ ,ನಯನ
ಅಲ್ವಾ…. ಧನ್ಯವಾದಗಳು
ಸೊಗಸಾದ ಕವನ….ನಯನ ಮೇಡಂ…..
Thank you….
ತುಂಬ ಚೆನ್ನಾಗಿ ಬರೆದಿರುವಿರಿ ಡಿಯರ್ ನಯನಾ..
Thank you dear
ಹೌದು..ಅನಿರೀಕ್ಷಿತಗಳ ಸರಮಾಲೆಯೇ ನಮ್ಮ ಈ ಬದುಕು. ನವಿರಾದ ಭಾವನೆಗಳನ್ನು ಚಂದದಿಂದ ನಯವಾಗಿ ಹೆಣೆದಿದ್ದೀರಿ ನಯನ ಮೇಡಂ.
Thank you madam
ಚಂದದ ಕವನ…
Thank you madam