ಬಂದಿತು ಸಡಗರದಿ ಸಂಕ್ರಾಂತಿ
ತಂದಿತು ನಿಸರ್ಗದಿ ಕ್ರಾಂತಿ
ಚಿಗುರಿಗೆ ಹಾತೊರೆಯುವಿಕೆ
ಹೊಸ ಚೈತನ್ಯದ ಉನ್ಮಾದಕೆ
ವಂದಿಸುತ ಜಗಚ್ಚಕ್ಷು ಸವಿತಗೆ
ಆಗಮನ ಕರ್ಕಾಟಕದಿ ಮಕರಗೆ
ಸಂಧಿಕಾಲದ ಮಕರ ಸಂಕ್ರಾಂತಿ ಮರ್ಮ
ಋತುಚಕ್ರದ ಪರಿವರ್ತನೆಯ ಪರ್ವ
ಚುಮು ಚುಮು ಚಳಿಯ
ಪೊರೆಯ ಸರಿಸಿ ಬೆಚ್ಚನೆಯ
ಹೂ ಬಿಸಿಲನ ಚುಂಬನೆಯ
ಧಾರೆಯ ಸುರಿಸುತ ಪ್ರೀತಿಯ
ಬದಲಿಸಿದ ಭಾಸ್ಕರ ಪಥವ
ಆರಂಭಿಸಿದ ಉತ್ತರಾಯಣವ
ಹೊಸ ಫಸಲಿನ ಹಿರಿಮೆಯಲಿ
ಆಚರಣೆ ಸಗ್ಗದ ಸುಗ್ಗಿಯಲಿ
ಪಂಚ ಕಜ್ಜಾಯ ಪೂಜಿಸುತ
ಮಧುರ ಸಿಹಿಯನು ಹಂಚುತ
ಸಿಹಿ ಖಾರದ ಪೊಂಗಲ್ ಮೆಲ್ಲುತ
ಎಳ್ಳು ಬೆಲ್ಲದಂತಿರೋಣ ಜೀವನ ಸವಿಯುತ
.
– *ರೇಮಾಸಂ*
ಡಾ. ರೇಣುಕಾತಾಯಿ. ಎಂ.ಸಂತಬಾ.
renukatai2004@gmail. com
.
renukatai2004@gmail. com
.
ಕವನ ಸೊಗಸಾಗಿದೆ
ಧನ್ಯವಾದಗಳು.. ತಮ್ಮ ಅಮೂಲ್ಯ ಪ್ರೇರಣೆಗೆ
ಸಂಕ್ರಾಂತಿಕೆ ಕವನದ ಸ್ವಾಗತ. ಚೆನ್ನಾಗಿದೆ.