ಎಂದು ನಿನ್ನ ನೋಡುವೆ?
ಸಿಣಕಲು ಮಳೆಯಲಿ,
ಏಕಾಂತ ನಡಿಗೆಯಲಿ,
ಜತೆಗೂಡಿ ನಡೆದವಳು ನೀನಲ್ಲವೇ?
ನೂರು ಚೆಲುವೆಯರ ಹಿಂಡು,
ಎದುರಾಗಿ ಬಂದರೂ,
ನೀನಿರದ ಆ ನೋಟ ಬರಿದಲ್ಲವೇ?
ಎಂದೋ ನೋಡಿದ ನೆನಪು,
ಕಲ್ಪನೆಗೆ ಸಿಗದ ನಿನ್ನ ರೂಪು,
ನಿನ್ನ ಕಾಣುವ ಬಯಕೆ ಅಳಿಯುಲ್ಲವೇ?
ಮಾಯಾ ಜಿಂಕೆಯ ತೆರದಿ,
ಕಂಡಂತೆ ನೀ ತೋರಿ,
ಕ್ಷಣದಲ್ಲಿ ಮರೆಯಾದುದು ನ್ಯಾಯವೇ?
ಮನಸು ಮಾಡಿದೆನೆಂದರೆ,
ಘಳಿಗೆಯಲೆದುರಾಗುವೆನು,
ನಿನ್ನ ಹಂಬಲಿಸುವುದೇ ಹಿತವಲ್ಲವೇ?
– ವಿನಯ್ ಕುಮಾರ್. ವಿ
Nicely written Vinay! Keep writing 🙂
ಥ್ಯಾಂಕ್ಸ್ ಶ್ರುತಿ 🙂
ಕವನ ಚೆನ್ನಾಗಿದೆ.
ಥ್ಯಾಂಕ್ಸ್ ಹೇಮಾ ಅವರೇ 🙂
nice reverie. ..
ಧನ್ಯವಾದಗಳು ಜಯಶ್ರೀ ಅವರೇ 🙂
ಚಿಂದಿ ಗುರು
ಪ್ರವೀಣಾ 🙂
ತುಂಬ ಚೆನ್ನಾಗಿದೆ 🙂
ಧನ್ಯವಾದಗಳು ಪೂರ್ಣಿಮಾ 🙂
wonderful narration vinay..too good.