ನಡುರಾತ್ರಿ ಕವನಗಳು.

Share Button
ಉರಿಯುತ್ತಿರುವ ದೀಪಕ್ಕು
ಹುಳುವೊಂದಕ್ಕು  ಪ್ರೀತಿ.
.
ದೀಪದ ಸುತ್ತ ರೆಕ್ಕೆ ಬಡಿದು
ಕಾವು ಎಬ್ಬಿಸಿ, ರಮಿಸಿ.
,
ಆಗಾಗ ದೀಪ ಕತ್ತಲ ಸೇರುತ್ತಿತ್ತು
ಹುಳುವು ಕತ್ತಲಲ್ಲಿ ತಡವುತ್ತಿತ್ತು.
.
ಮತ್ತೆ ದೀಪ ಬೆಳಕಾಗುತ್ತಿತ್ತು
ಹುಳುವು ಬೆಚ್ಚಗಾಗುತಿತ್ತು.
.
ಕೋಣೆ ಒಳಗೆ ಹೊಸತೊಂದು
‘ಗಾಳಿ’ ತಾಕಿ ದೀಪಕ್ಕೆ ರೋಮಾಂಚನ.
.
ದೀಪ ನರ್ತನವರಿಯದ ಹುಳು,
ಸುತ್ತುವ ಗತಿ ಬದಲಾಗದ ಪ್ರೇಮ.
.
ಹೊತ್ತಿ ಉರಿಯಿತು ರೆಕ್ಕೆಗಳು
ಹಾರಲಾಗದೆ ಹುಳು ಬಿತ್ತುದೀಪದ ಕೆಳಗಿನ ಕತ್ತಲಲ್ಲಿ
ತಡವುತ್ತಿದೆ ತಡವುತ್ತಿದೆ
ಮತ್ತೆ ಮತ್ತೆ ತಡವುತ್ತಿದೆ..

–  ಎಸ್. ಶೈಲಜೇಶ.
.

2 Responses

  1. ನಯನ ಬಜಕೂಡ್ಲು says:

    ದೀಪದ ಬೆಳಕಿನ ಪ್ರೀತಿಯಲ್ಲಿ ಜೀವ ತೆತ್ತ ಹುಳು . ಚೆನ್ನಾಗಿದೆ ಕವನ .

  2. Shankari Sharma says:

    ದೀಪದಾಕರ್ಷಣೆಗೆ ಬಲಿ ತೆತ್ತ ಜೀವ..ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: