ಹತ್ತರೊಳಗಿನ
ಒಂದು ಕಡೆ ನೆಲೆ ನಿಲ್ಲವಾಗೇ
ಬಿಂದುವಂತೆ ಸ್ಥಿರವಾಗಿರುವಾಗೇ
ಬಿಂದುವಂತೆ ಸ್ಥಿರವಾಗಿರುವಾಗೇ
ಇಂದುಧರನ ಭಜಿಸಲಾರೇತಕೆ?
.
ಎರಡು ನಾಲಿಗೆ ಹಾವಂತಾಗದೇ
ಎರಡು ನಾಲಿಗೆ ಹಾವಂತಾಗದೇ
ಎರಡು ಬುದ್ಧಿಯ ಹೊಂದದಂತೆ
ಎರಡು ಗಳಿಗೆ ಧ್ಯಾನಿಸಲಾರೇತಕೆ?
.
ತ್ರಿಕರಣ ಶುದ್ಧವನು ಪಡೆಯಲು
ತ್ರಿಕರಣ ಶುದ್ಧವನು ಪಡೆಯಲು
ತ್ರಿಕಾಲವು ಮುಗ್ಧ ಮನದಿಂದ
ತ್ರಿಮೂರ್ತಿಗಳ ಪೂಜಿಸಲಾರೇತಕೆ?
,
ಚತುರ್ಮುಖನ ಸೃಷ್ಟಿಯಲಿ
ಚತುರ್ಮುಖನ ಸೃಷ್ಟಿಯಲಿ
ಚತುರ ಸಿದ್ಧಿ ಬುದ್ಧಿಯ ಪಡೆದು
ಚಾರಿತ್ರ್ಯದಿಂದ ಬಾಳಲಾರೇತಕೆ?
.
ಪಂಚ ಭೂತಗಳಿಂದಾದ ದೇಹದ
ಪಂಚ ಭೂತಗಳಿಂದಾದ ದೇಹದ
ಪಂಚೇಂದ್ರಿಯಗಳ ನಿಗ್ರಹಿಸುವ
ಪಂಚತಂತ್ರವ ತಿಳಿಯಲಾರೇತಕೆ?
.
ಷಡ್ವರ್ಗಗಳನು ಅರಿಯ ಜಯಿಸುವ
ಷಡ್ವರ್ಗಗಳನು ಅರಿಯ ಜಯಿಸುವ
ಷಡ್ಕೋನದ ಗಣಿತ ನಿಯಮವನು
ಷಣ್ಮುಖನಂತೆ ಅರಿಯಲಾರೇತಕೆ?
,
ಸಪ್ತ ವರ್ಣಗಳ ಮಳೆಬಿಲ್ಲ ಬಾಳನು
ಸಪ್ತ ವರ್ಣಗಳ ಮಳೆಬಿಲ್ಲ ಬಾಳನು
ಸಪ್ತ ಸಾಗರಗಳ ಗಾಂಭೀರ್ಯವನು
ಸಪ್ತ ಋಷಿಗಳಂತೆ ಜಯಿಸಲಾರೇತಕೆ?
.
ಅಷ್ಟ ಮದಗಳ ಮದವಡಿಗಿಸಿ
ಅಷ್ಟ ಮದಗಳ ಮದವಡಿಗಿಸಿ
ಅಷ್ಟೈಶ್ವರ್ಯದ ಸೌಖ್ಯವ ದೀನಾಗಿ
ಅಷ್ಟ ದಿಕ್ಕುಗಳಲಿ ಬಾಳಲಾರೇತಕೆ?
.
ನವ ಮಾಸದಿ ಹುಟ್ಟಿದ ಶಿಶುವಿನ ತಲೆಯಲ್ಲಿ
ನವ ಮಾಸದಿ ಹುಟ್ಟಿದ ಶಿಶುವಿನ ತಲೆಯಲ್ಲಿ
ನವಗ್ರಹ ಜೋತಿಷ್ಯವ ತುಂಬುವ ಬದಲು
ನವನೀತ ತುಪ್ಪದ ಪಾಠ ಹೇಳಲಾರೇತಕೆ?
.
ಹತ್ತರೊಳಗಿನ ಈ ಜೀವನ ತತ್ವವನು
ಹತ್ತರೊಳಗಿನ ಈ ಜೀವನ ತತ್ವವನು
ಹತ್ತು ಮಂದಿಗೆ ಹಂಚುವ ಮನಸನು
ಹತ್ತು ನಿಮಿಷ ನೀನು ಮಾಡಲಾರೇತಕೆ?.
.
– ಶಿವಮೂರ್ತಿ.ಹೆಚ್ , ದಾವಣಗೆರೆ.
no words
ಧನ್ಯವಾದಗಳು ಮೇಡಂ..
ಒಂದರಿಂದ ಹತ್ತರೊಳಗಿನ ಜೀವನ ತತ್ವವನ್ನು ನಿರೂಪಿಸುವ ಸುಂದರ ಕವನ.
ಧನ್ಯವಾದಗಳು ಮೇಡಂ
So beautiful chennagide
Vasathavda Nika jivana Satya
Naviiru badku bavne satyakke bele illa bannavilide natka maduva janarige stana mana asthi olleya jivana maryade labisuttade