ನೀಲಿ ಅನ್ನ, ನೀಲಿ ಚಹಾವನ್ನು ಕಂಡಿದ್ದೀರಾ?!
ಶಂಖ ಪುಷ್ಪ, ಅಪರಾಜಿತ (ಹಿಂದಿ), ಬಟರ್ ಫ಼್ಲೈ ಪೀ (ಆಂಗ್ಲ) ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡವನ್ನು ಉದ್ಯಾನದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸುತ್ತಾರೆ. ಬಳ್ಳಿಯಲ್ಲಿ ಬೆಳೆಯುವ ಇದು ಪೂಜೆಗೂ ಸಲ್ಲುವ ಪುಷ್ಪ. ಚಟ್ಟಿ ಹಾಗೂ ಟೆರೇಸ್ ಗಾರ್ಡನ್ ಗಳಲ್ಲೂ ಬೆಳೆಸಬಹುದು. ಕಡು ನೀಲಿ, ಆಕಾಶ ನೀಲಿ, ಬಿಳಿ, ಏಕದಳ, ಬಹುದಳ ಹೀಗೆ ಬಹು ವಿಧಗಳಲ್ಲಿ ಕಂಡುಬರುತ್ತದೆ.
ಏಷಿಯಾದ ಬಹಳ ದೇಶಗಳಲ್ಲಿ ಅಡುಗೆಯಲ್ಲಿ ಕೇವಲ ಬಣ್ಣಕ್ಕಾಗಿ ಇದನ್ನು ಬಳಸುವರಾದರೂ ಆಯುರ್ವೇದದಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆಯಿದೆ. ನನಗೆ ತಿಳಿದಂತೆ ಇದು ಬೇರಿನೊಂದಿಗೆ ತೆಗೆದುಕೊಂಡರೆ ಮೆದುಳಿನ ಆರೋಗ್ಯ ಹಾಗೂ ನೆನಪು ಶಕ್ತಿ ವೃದ್ಧಿಗೆ ಸಹಾಯಕ.
ಬಣ್ಣ ಬಿಟ್ಟರೆ ಇದಕ್ಕೆ ದೊಡ್ಡ ರುಚಿ ಇಲ್ಲ, ಸ್ವಲ್ಪ ಮಣ್ಣಿನ ಪರಿಮಳ ಅಷ್ಟೆ. ಮಲೇಷ್ಯಾದಲ್ಲಿ ನೀಲಿ ಅನ್ನ, ಥೈಲ್ಯಾಂಡ್ ನಲ್ಲಿ ನೀಲಿ ಪಾನೀಯ ಹಾಗೂ ಇತರ ಆಹಾರಗಳಲ್ಲಿ ಬಳಸುವ ಈ ಪುಷ್ಪ ದುಬಾರಿಯೂ ಹೌದು!
ನೀಲಿ ಅನ್ನ
ಬೇಕಾದ ಸಾಮಗ್ರಿ: ಅನ್ನದ ಅಕ್ಕಿ – 1 ಕಪ್, ನೀರು – 2.5 ಕಪ್, ನೀಲಿ ಶಂಕಪುಷ್ಪ – 10 , ಮಜ್ಜಿಗೆ ಹುಲ್ಲು – 1 ತುಂಡು ದಂಟು (ಬೇಕಾದಲ್ಲಿ)
ವಿಧಾನ: ಕುಕ್ಕರ್ ಗೆ ತೊಳೆದ ಅಕ್ಕಿ, ನೀರು, ತೊಳೆದ ಹೂಗಳು, ತುಂಡರಿಸಿದ ಲೆಮನ್ ಗ್ರಾಸ್ ಹಾಕಿ 3 ವಿಸಿಲ್ ಕೂಡಿಸಿ. ಅನ್ನ ಬೆಂದ ನಂತರ ನಿಮಗೆ ಇಷ್ಟದ ಸೈಡ್ ಡಿಶ್ ನೊಂದಿಗೆ ಬಡಿಸಿ.
ನೀಲಿ ಚಹಾ
ನೀರು – 1 ಲೋಟ, ನೀಲಿ ಶಂಕಪುಷ್ಪ : 7-8
ನೀರು ಕುದಿಸಿ, ತೊಳೆದ ಹೂಗಳನ್ನು ಹಾಕಿ ಮುಚ್ಚಿಟ್ಟು ಒಂದು ನಿಮಿಷ ಬಿಟ್ಟು ಸೋಸಿ ಕುಡಿಯಿರಿ. ಬೇಕಾದಲ್ಲಿ ಜೇನು ಸೇರಿಸಿ ಕುಡಿಯಬಹುದು.
ವಿ. ಸೂ: ಈ ಚಹಾಕ್ಕೆ ಕೆಲವು ಬಿಂದು ನಿಂಬೆ ರಸ ಬೆರೆಸಿದರೆ ಇದು ನೇರಳೆ ಬಣ್ಣಕ್ಕೆ ತಿರುಗುತ್ತದೆ.
– ನಿಶಾ, ಮಿತ್ತೂರು
ಹೀಗೂ ಉಂಟೆ.
ಹೊಸ ವಿಚಾರ. ನಮ್ಮ. ಸುತ್ತ ಮುತ್ತ ಇರುವ ಗಿಡಗಳು, ಅದರ ಗುಣಗಳ ಬಗ್ಗೆ ಹಲವಾರು ಬಾರಿ ನಮಗೇನೂ ಗೊತ್ತಿರುವುದಿಲ್ಲ , ಇದೂ ಹಾಗೇನೇ . Nice
Thank you. Happy that you liked this information!
ವಾವ್ ವಿಶೇಷ ವಿಚಾರ ಮೇಡಂ,, ನಮಗೆ ಗೊತ್ತೇ ಇರಲಿಲ್ಲ
ಧನ್ಯವಾದಗಳು
ಬಣ್ಣ, ಪರಿಮಳ,ರುಚಿ ಎಲ್ಲವೂ ನಮ್ಮ ಜೀರ್ಣ ಗ್ರಂಥಿಯ ಕೆಲಸವನ್ನು ಉತ್ತೇಜಿಸುವ ಕಾರಣ ನಿಮ್ಮ ಈ ಲೇಖನ ಓದಿದ ಮೇಲೆ ಪ್ರಯೋಗ ಮಾಡುವ ಕುತೂಹಲ ಇದೆ. ಒಂದು ಸಮಸ್ಯೆಅಡಿಗೆ ಮಾಡುವುದು ನಾನಲ್ಲ !
ಧನ್ಯವಾದಗಳು.. ಇದರ ಅಡಿಗೆ ಮಾಡಲು ಕಷ್ಟವಿಲ್ಲ. Atleast you can try making tea!!
ನೀಲಿ ಅನ್ನ, ಚಹಾ ವಿಶಿಷ್ಟವಾಗಿದೆ. ನಾನೂ ಪ್ರಯತ್ನಿಸುವೆ.
ಧನ್ಯವಾದಗಳು, ತುಂಬಾ ಸಂತೋಷ
ಈ ವಿಚಾರ ಗೊತ್ತೇ ಇರಲಿಲ್ಲ
ಧನ್ಯವಾದಗಳು
ನಾನು Facebook nali ಓದಿದ್ದೆ . ನಮ್ಮ ಗ್ರೂಪಿಗೆ ತಿಳಿಸಿದ್ದಕ್ಕೆ ಧನ್ಯವಾದಗಳು ,
ಧನ್ಯವಾದಗಳು ಇಷ್ಟ ಪಟ್ಟದ್ದಕ್ಕೆ!
ವಿಶೇಷ ಮಾಹಿತಿಯ, ಚಂದದ ಬರಹ..ಚಂದದ ನೀಲಿ ಅನ್ನ ಹಾಗೂ ಟೀಯಂತೆ. ಅವುಗಳಿಗೆ ಏನಾದರೂ ವಿಶೇಷ ಪರಿಮಳ ಬರುವುದೇ?
ತುಂಬಾ ಧನ್ಯವಾದಗಳು.. ಅಂತಹ ತೀಕ್ಷ್ಣ ಪರಿಮಳವಿಲ್ಲ. ಸ್ವಲ್ಪ ಹಸಿ ವಾಸನೆ ಬಿಟ್ಟರೆ. ಇನ್ನೂ ಪರಿಮಳ ಬೇಕಿದ್ದರೆ, ಮಜ್ಜಿಗೆ ಹುಲ್ಲಿನಂತಹ ಹರ್ಬ್ ಸೇರಿಸಬಹುದು