ನಂದಾದೀಪ
ಜಗವ ಸೃಷ್ಟಿಸಿದ ಆ ದೇವರ
ಪ್ರತಿರೂಪವಾಗಿ ಜೊತೆಯಲ್ಲಿರುವ
ಜೀವನದಲ್ಲಿ ಮೇಲುಕೀಳಗಳೆಂಬ
ದುರ್ಭಾವನೆಯಿಲ್ಲದಿರುವ.
ಮುಗ್ಧ ನಗು ಅಳುವಿನಿಂದಲೇ
ಸರ್ವರ ಮನವ ಗೆಲ್ಲುತ್ತಿರುವ
ಜಾತಿ ಮತಗಳ ವಿಷವ ಅರಿಯದೇ
ಎಲ್ಲರ ಜೊತೆ ಕೂಡಿ ಬಾಳುತ್ತಿರುವ.
ಮುದ್ದು ಮನಸಿನ ಭಾವನೆಯ ಕನ್ನಡಿ
ಪೆದ್ದು ನಗುವಿನ ವರ್ತನೆಯ ಚೆನ್ನುಡಿ
ನಿರ್ಮಲ ಹೃನ್ಮನಗಳ ಭಾವದ ಪ್ರತಿರೂಪ
ಸ್ನೇಹ ಸಹಬಾಳ್ವೆ ಸಹನೆಯ ನಂದಾದೀಪ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಬುದ್ಧಿವಂತಿಕೆ ನಮ್ಮ ಅವಶ್ಯಕತೆ ಆದರೂ ,ಪೆದ್ದುತನ ನಮಗೆ ಮೋಸ ಮಾಡಬಹುದಾದ ಅಪಾಯಕಾರಿಯಾಗಿ ಇರುವುದಿಲ್ಲ!! ಮಕ್ಕಳಲ್ಲಿ ಇದು ಸಹಜವಾಗಿ ಇರುವ ಕಾರಣ ಮಕ್ಕಳು ನಮಗೆ ಇಷ್ಟವಾಗುತ್ತಾರೆ
ನಿಜ ಸರ್. ತುಂಬು ಹೃದಯದ ಧನ್ಯವಾದಗಳು
ಚೆನ್ನಾಗಿದೆ ಸರ್ ಕವನ . ನಿಜ ದರ್ಪಣದಂತೆ ಪ್ರತಿಯೊಂದೂ ಮಗುವಿನ ಮನಸ್ಸು , ಅಲ್ಲಿ ಯಾವುದೇ ಕಲ್ಮಶವಿಲ್ಲ . ಎಲ್ಲೋ ಓದಿದ ನೆನಪು , ಮಕ್ಕಳ ಮನಸು ಹಸಿ ಮಣ್ಣಿನ ಹಾಗೆ , ಅದಕ್ಕೆ ಬೇಕಾದ ರೂಪ ಕೊಡುವುದು ಹಿರಿಯರ ಕೈಯ್ಯಲ್ಲಿದೆ ಅಂತ .
ಹೌದು ಮೇಡಂ. ತುಂಬು ಹೃದಯದ ಧನ್ಯವಾದಗಳು
ಮುಗ್ಧ ಮಗುವಿನ ನಿಷ್ಕಳಂಕ ಭಾವನೆಗಳಿಗೆ ಬೆಲೆಕಟ್ಟಲಾಗದು..ಚಂದದ ಕವನ.
ತುಂಬು ಹೃದಯದ ಧನ್ಯವಾದಗಳು.