ಬ್ಯಾಸ್ಗಿ ಮಳಿ…

Share Button
ಬ್ಯಾಸಿಗ್ಯಾಗೆ ಮಳಿ ಬಂದಾದೋ,
ಹೊಳೀ ತೊಯ್ದಾದೋ,,,
ಬಿರುಕು ಬಿಟ್ಟ ನೆಲದ
ಒಡಲಿಗೆ ತಂಪನೆರೆದಾದೋ,,,
.
ಒಣಗುತ್ತಿದ್ದ ಕೆರೆಕಟ್ಟೆಗುಂಟ
ನೀರೊರತೆ ನೀಡ್ಯಾದೋ..
ಬತ್ತುತ್ತಿದ್ದ ಬಾವಿಗಳಿಗೆ
ನೀರ ಬಸಿದ್ಯಾದೋ,,
.
ಹತ್ತುತ್ತಿದ್ದ ಕಾಡಿನ ಬೆಂಕಿ
ಆರಿ ಹೋಗ್ಯಾದೋ,,
ಒಣಗುತ್ತಿದ್ದ ಬ್ಯಾಸಿಗಿ ಬೆಳಿಗೆ
ನೀರ ಚೆಲ್ಯಾದೋ,.
.
ಬಸಿಯುತ್ತಿದ್ದ ಬೆವರ ಜೊತಿ
ಸೇರಿ ಹರಿದ್ಯಾದೋ,,
ಹಾರುತ್ತಿದ್ದ ಧೂಳಿನ ಕಣಗಳ
ತಟ್ಟಿ ಮಲಗಿಸ್ಯಾದೋ..
.
ಕೂಗುತ್ತಿದ್ದ ಕೋಗಿಲೆ ಕೂಗಿಗೆ
ಸಂಗೀತ ನೀಡ್ಯಾದೋ,,
ಚಿಗುರುತ್ತಿದ್ದ ಮಾವಿನಮಿಡಿ
ಜೊತಿಗೆ ನೃತ್ಯ ಮಾಡ್ಯಾದೋ,,
.
ಬೆಳೆದು ನಿಂತ ಹೊಂಗೆ ಹೂವು
ಬಾಗಿ ತೂಗ್ಯಾದೋ..
ಬೀಳುತ್ತಿದ್ದ ಆಲಿಕಲ್ಲು
ಆಡಿ ನಲಿದ್ಯಾದೋ,,
.
ಸಾಯುತ್ತಿದ್ದ ಪ್ರಾಣಿ, ಪಕ್ಷಿಗೆ
ನೀರ ಚಲ್ಯಾದೋ,,
ಆಡುತ್ತಿದ್ದ ಮಕ್ಕಳು ಮರಿಗೆ

ಕಾರಂಜಿಯಾಗ್ಯಾದೋ,,

-ಸುಮಿ

2 Responses

  1. Nayana Bajakudlu says:

    ನಿಮ್ಮ ಕವನ ಓದಿ ಮನಸಿನ ಇಳೆಯ ಮೇಲೂ ಮಳೆ ಸುರಿದಂಗಾಯ್ತು.

  2. Vasundhara Kadaluru Mallappa says:

    ಜನಪದ ..!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: