ಪುಸ್ತಕ ದಿನ…’ಒಡಲ ಕಿಚ್ಚಿನ ಹಿಲಾಲು ಹಿಡಿದು’
ವಿಶ್ವ ಪುಸ್ತಕ ದಿನದ ದಿನ ನನ್ನ ಓದುವ ಹವ್ಯಾಸವನ್ನೊಮ್ಮೆ ನೆನೆದೆ. ಬಾಲ್ಯದಲ್ಲಿ ಓದುವ ಹುಚ್ಚು ಹಿಡಿಸಿದ್ದು ಅಪ್ಪ. ಪ್ರಾಥಮಿಕ ಶಾಲೆಯಲ್ಲಿ (ಆಗ ಅದು ಏಕೋಪಾಧ್ಯಾಯ ಶಾಲೆಯಾಗಿದ್ದರೂ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಮತ್ತೆ ಮತ್ತೆ ನಾನೇ ಶಾಲಾ ಲೈಬ್ರೆರಿಯಿಂದ ಪುಸ್ತಕಗಳನ್ನು ಪಡೆದು ಓದಲು ಶುರು ಮಾಡಿದೆ. ಪುಸ್ತಕಗಳು ಮನುಷ್ಯನ ನಿಜವಾದ ಗೆಳೆಯರು ಎಂಬ ಉಕ್ತಿಯಿದೆ. ನನಗಂತೂ ಈ ಮಾತು ಸತ್ಯ ಅನಿಸಿದೆ. ನನಗೆ ಖುಷಿ ಕೊಡುವ ಸಂಗತಿಯೆಂದರೆ ನನ್ನ ಎರಡನೇ ಮಗಳಿಗೆ ಉತ್ತಮ ಓದುವ ಹವ್ಯಾಸವಿರುವುದು. “ಅಮ್ಮಾ ಪ್ಲೀಸ್, ಲೈಬ್ರೆರಿಗೆ ಕರೆದುಕೊಂಡು ಹೋಗು” ಎಂದು ದುಂಬಾಲು ಬೀಳುವ ಅವಳು ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಾಳೆ. ನನ್ನ ಶಿಕ್ಷಕ ವೃತ್ತಿಯಲ್ಲೂ ಓದುವ ಹವ್ಯಾಸವಿರುವ ಹಲವು ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ದೂರುವ ಬದಲು, ಅವರಲ್ಲಿ ಆ ಆಸಕ್ತಿ/ ಹವ್ಯಾಸ ಮೂಡಿಸಲು ನಾವು ಪ್ರಯತ್ನಿಸಬೇಕು. ಹೊಸ ಹೊಸ ಬರಹಗಾರರು ಹುಟ್ಟುತ್ತಿರುವ ಹಾಗೇ ಹೊಸಹೊಸ ಓದುಗರೂ ಹುಟ್ಟುತ್ತಿರುತ್ತಾರೆ. ಖಂಡಿತಾ, ಪುಸ್ತಕಗಳಿಗೆ ಸಾವಿಲ್ಲ. ನನ್ನ ಓದುವ ಹವ್ಯಾಸವನ್ನು ತೃಪ್ತಿಪಡಿಸಲು ನಾನು ಓದಿದ ಹಲವು ಪುಸ್ತಕಗಳಲ್ಲಿ ಎರಡನ್ನು ಇಲ್ಲಿ ಪರಿಚಯಿಸಿದ್ದೇನೆ. ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು.
ಒಂದು ಅಸಹಾಯಕ ಹೆಣ್ಣಿನ ಒಡಲಾಳವನ್ನು ಬಿಚ್ಚಿಡುವ “ಆ ಮೂರನೆಯವಳು” ಕವನ ಹೃದಯಕ್ಕೊಂದು ಗೀರು ಬೀಳಿಸುತ್ತದೆ.
ಮತ್ತೊಂದು ಉಲ್ಲೇಖಿಸಬೇಕಾದ ಕವನ “ಶಾಪಗ್ರಸ್ಥರು”
ನಾಗೇಶ್ ಜೆ ನಾಯಕ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆಯೂ ಇವರಿಂದ ಹಲವು ಉತ್ತಮ ಕೃತಿಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.
.
– ಜೆಸ್ಸಿ ಪಿ ವಿ, ಪುತ್ತೂರು
ಪುಸ್ತಕ ಪರಿಚಯ ಚೆನ್ನಾಗಿದೆ
ನಿಮ್ಮ ಮಗಳಿಗೆ ಓದುವ ಹವ್ಯಾಸ, ಅದನ್ನು ಉತ್ತೇಜಿಸುವ ನಿಮ್ಮನ್ನು ಮೆಚ್ಚಬೇಕು. ಅವಳಿಗೆ ಶ್ರೇಯಸ್ಸಾಗಲಿ
ಕೃತಿ ಪರಿಚಯ ಚೆನ್ನಾಗಿ ಮೂಡಿಬಂದಿದೆ.