ಅಂತದೇನಿದೆ ಇದರೊಳಗೆ
ಏನೆಲ್ಲಾ ಅಡಗಿಸಿಕೊಂಡಿದೆ
ತನ್ನ ಮಡಿಲೊಳಗೆಲ್ಲ
ಸುಡುತಿದೆ ಜಗವ ತನ್ನ
ಆಧುನಿಕತೆಯ ಕಿಚ್ಚಿನಿಂದ
ಕಿಡಿ ಹಾರಿ ಸುಡುತಿದೆ ಜಗವ.
.
ಅವಸರದ ಹೆಜ್ಜೆಯ ಮೇಲೆ
ಸರಿವ ಬಂಡಿಯಂತೆ ಬದುಕು ಉರುಳುತಿದೆ
ಸಮಯದ ಮಿತಿಯೊಳು ಸೆರೆಯಾಗಿ
ಬಲೆಯೊಳು ಸಿಲುಕಿದ ಮೀನಿನಂತೆ
ವಿಲವಿಲನೆ ಪದರುಗುಟ್ಟುತ!
ದಿಕ್ಕುತಪ್ಪಿದ ಹಾಯಿಯಂತೆ
,
ಅಲೆ ಅಲೆದು ಅಲೆಮಾರಿಯಾಗಿ
ಕಡೆಗೆ ಮೊಗದ ಮೇಲೆ
ಒತ್ತಡದ ಮಣಭಾರವ ಹೊತ್ತು !
ಇಳಿ ಸಂಜೆಯ ವೇಳೆಗೆ
ಮನೆಗೆ ಹಿಂತಿರುಗಿದರೆ
ಮೂಜಗವ ಮರೆತು
,
ಜಾಲಾಡುತಿರುವ ಜಾಡು ಹಿಡಿದು
ಅಂತದೇನಿದೆ, ಇದರೊಳಗೆ
ಆಧುನಿಕತೆಯ ಬಲೆಯೊಳಗೆ
ಕಾಲವೇ ವೇಗವಾಗಿರುವಾಗ
ಭೂತ, ಭವಿಷ್ಯ, ವರ್ತಮಾನದ
ಬಗ್ಗೆ ಚಿಂತಿಸದಿರುವಾಗ
,
ಮುಂದೊಮ್ಮೆ ನಾವೆಲ್ಲಾ
ಹಿಂದಿನ ಬದುಕಿನ
ಕನಸು ಕಾಣವ ಬದಲು
ಮನುಕುಲದ ನಾಶಕ್ಕೆ
ಆಧುನಿಕತೆಯ ಉರುಳು
ಪಾಶವಾಗಿ ಕೊರಳು
ಸುತ್ತಿಕೊಳ್ಳುವ ಮೊದಲು
ಎಚ್ಚೆತ್ತು ಕೊಳ್ಳಬೇಕಾಗಿದೆ.
-ಶ್ರೀನಿವಾಸ್ ಕೆ.ಎಂ. ರಾಮನಗರ ಜಿಲ್ಲೆ.
ನಿಜ. ಲಂಗು ಲಗಾಮಿಲ್ಲದೆ ಓಡುತ್ತಿರುವ ಆಧುನಿಕತೆ ಪಾಶವೇ ಆಗುತ್ತಿದೆ . ಪ್ರಸ್ತುತ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಪದಗಳಲ್ಲಿ ಸೆರೆ ಹಿಡಿದಿದ್ದೀರಿ ಸರ್ . ನೈಸ್