ವರಕವಿಗೆ ನುಡಿ ನಮನ
“ಜನ್ಮ ದಿನೋತ್ಸವದ ಅಂಗವಾಗಿ ವರಕವಿಗೊಂದು ನುಡಿ ನಮನ”;
ಕವಿ, ಕವಿತೆಯೆಂದರೆ ಸಾಗುವದು ಎನ್ನ ಚಿತ್ತ
ದತ್ತನತ್ತ
ಅಂಬಿಕಾತನಯದತ್ತನತ್ತ…
ಸಾಧನಕೇರಿಯ ಸಾಧಕನೇ.
ರವಿ ಕಾಣದ್ದನ್ನು ಕವಿ ಕಂಡಾ ಎಂಬಂತೆ
ರವಿ ಕಾಣದ ಎಷ್ಟೊಂದು ವಿಷಯ ನಿನಗೆ ಗೊತ್ತು
ಸರಳ ಸುಂದರ ಆಡು ಭಾಷೆಯಿಂದ ಕೂಡಿದ ನಿನ್ಧ ಕವಿತೆಯ ಒಂದೊಂದು ಸಾಲಿನಲ್ಲೂ
ಅದೇನು ಗತ್ತು
ಅದೇನು ಗಮ್ಮತ್ತು
ವರಕವಿ ಎಂಬ ಬಿರುದು ನಿನಗೆ ಸಾರ್ಥಕವಾಯ್ತು.
ಈಗ ನಿನ್ನ ಹೆಸರಲ್ಲಿ ಅದೆಷ್ಟು ಪ್ರಶಸ್ತಿ ಪುರಸ್ಕಾರಗಳು,
ಅದೆಷ್ಟು ಅಧ್ಯಯನ ಕೇಂದ್ರಗಳು,
ಅದೆಷ್ಟು ಮಾರ್ಗಗಳು,
ಅಷ್ಟೇ ಏಕೆ ಹುಬ್ಬಳ್ಳಿ ಧಾರವಾಡ ಮಧ್ಯೆ ಓಡುತಿವೆ ನಿನ್ನ ಹೆಸರಿನ ಬಸ್ಸುಗಳು,
ಮನಸ್ಸಿಗೆ ಮುದ ನೀಡುತ್ತಿವೆ ಇವೆಲ್ಲವುಗಳು..
ಕವಿಯಾಗಿ ನಿನ್ನ ಸಾಧನೆ ಅಪಾರ.
ಭಾರತೀಯ ಸಾರಸ್ವತಲೋಕದಲ್ಲಿ ನಿನ್ಧ ಹೆಸರು ಅಜರಾಮರ.
ಹೇ ಅಂಬಿಕಾ ನಂದನ,
ನಿನಗೆ ನಮ್ಮೆಲ್ಲರ ಭಾವಪೂರ್ಣ ನಮನ…..
.
-ಮಾಲತೇಶ ಎಂ. ಹುಬ್ಬಳ್ಳಿ
ಸಾಂದರ್ಭಿಕ ಕವನ ಚೆನ್ನಾಗಿದೆ. ವರಕವಿಗೆ ನಮನಗಳು .