ಮನದೀಪ ಬೆಳಗಲಿ..
ನಿರಾಸೆ ನಿಶೆಯದು ಓಡಿ
ಬಂತು ಆಸೆಯ ಬೆಳಕು
ಮನಕೆ ಮುದ ತಾ ನೀಡಿ
ಸಂಭ್ರಮದ ಮೆಲುಕು
ಅಭ್ಯಂಜನದ ಪರಿಯ
ತಿಳಿಯೆ ಕೊಳೆ ನಿರ್ನಾಮ
ಅಂತರಂಗದ ಕೊಳೆಯ
ತೊಳೆಯೆ ದೇವರನಾಮ
ಕೆಟ್ಟ ಆಸೆಗಳ ಅಸುರ
ನರಕನನು ತಾ ಮೆಟ್ಟಿ
ನಿಲ್ಲಬೇಕಿದೆ ಜನರ
ಮನ ಕದವ ತಟ್ಟಿ
ಸುತ್ತ ದೀಪಾಲಂಕಾರ
ಝಗಝಗಿಸಿ ಸಿಂಗರಿಸಿ
ಪ್ರೀತಿ ಕರುಣೆಯ ಹಾರ
ಸೊಗಸಿನಲಿ ತೊಡಿಸಿ
ಬೆಳಕಿನಾ ಪ್ರಣತಿಯದು
ಬೆಳಗೆ ಮನ ಗುಡಿಯಲ್ಲಿ
ಸಂತಸದ ಭಾವವನು
ಜನ ಮನದಿ ಹರಡಿ…
ತಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಗೆ ಹೃತ್ಪೂರ್ವಕ ಶುಭಾಶಯಗಳು🙏🙏
– ಶಂಕರಿ ಶರ್ಮ, ಪುತ್ತೂರು.
ಚಂದದ ಕವನ
ಧನ್ಯವಾದಗಳು ನಿಮಗೆ ..
Super
Super