ಕನ್ನಡ….ಕನ್ನಡ….
ಕಸ್ತೂರಿ ಕನ್ನಡ ನಮ್ಮದು
ಸಂಪಿಗೆ ಕಂಪ ಸೂಸುವ ಕನ್ನಡ…
ಮನೆ ಮಗುವಿನ ತೊದಲು ನುಡಿ ಕನ್ನಡ
ಅಮ್ಮ ಕಲಿಸಿದ ವರ್ಣಮಾಲೆ ಕನ್ನಡ
ಮನೆಮನಗಳಲಿ ಅರಳುತಿರುವ
ಮಲ್ಲಿಗೆಯ ಘಮಲಂತೆ ಕನ್ನಡ
ಮಾತೃಭಾಷೆ ಕನ್ನಡ, ನಾಡ ನುಡಿ ಕನ್ನಡ…
ನಾಗವರ್ಮ, ಕೇಶಿರಾಜ, ಭಟ್ಟಾಳಂಕದೇವನ ವ್ಯಾಕರಣವು ಕನ್ನಡ
ಅಕ್ಕಮಹಾದೇವಿ, ಬಸವಣ್ಣ, ಶರಣರ ನುಡಿವಚನ ಕನ್ನಡ
ಪಂಪ, ರನ್ನ,ರಾಘವಾಂಕರು ಆಡಿದ ನುಡಿ ಕನ್ನಡ
ಕುವೆಂಪು,ಬೇಂದ್ರೆ,ನಿಸಾರ್ ಅಹಮದರು ಉಳಿಸಿದ ನುಡಿ ಕನ್ನಡ
ಜೀವವದು ಕನ್ನಡ, ಜೀವನ ನೀಡುವ ಕನ್ನಡ
ಭಾವವದು ಕನ್ನಡ, ಭಾರಿಯಿದು ಕನ್ನಡ
ಮಾಧವನೂದುವ ಮಧುರ ಕೊಳಲ ಗಾನದಂತೆ ಕನ್ನಡ
ಜೇನು ಸುತ್ತಿ ತಂದು ಕಟ್ಟಿದ
ಮಧುವಿನ ಸವಿಯಂತಿದು ಕನ್ನಡ…
ಹಳೆಗನ್ನಡ, ಹೊಸಗನ್ನಡ, ಮಲೆನಾಡ ಕನ್ನಡ,
ಉತ್ತರದ ದಕ್ಷಿಣದ ಕನ್ನಡ, ಗಡಿನಾಡ ಕನ್ನಡ,
ಕವಿವರ್ಯರ ಕಿವಿಗಿಂಪಿನ ಕನ್ನಡ, ಸಾಹಿತಿಗಳ ಸಾಹಿತ್ಯವದು ಕನ್ನಡ
ಆಳಿದ ರಾಜರುಗಳ ಶಾಸನಗಳಲಿ ನೋಡಿದ ಸಿರಿಗನ್ನಡ…
-ಸುಮನ ದೇವಾನಂದ (ಸುಮಿ)