ಬುದ್ಧನಾಗಿಸಿದೆಯಲ್ಲೋ!
ನನ್ನೊಳಗೆ ಕವಿದ ಮಂಕನುರುಳಿಸಿ
ಒಲುಮೆ ಬತ್ತಿದ ಎದೆಯೊಳಗೆ
ಪ್ರೀತೀಯ ಸುಧೆಯ ಹರಿಸಿ
ಕೊಂದೆಯಲ್ಲವೋ ನೀ ಎನ್ನ.
ಕಾಣದಿಹ ಲೋಕ ದರ್ಶನವ
ನಿನ್ನ ಕಂಗಳಲ್ಲಿ ಕಾಣಲು
ನಾ ಭ್ರಾಂತಿಯಾದೆನಲ್ಲೋ.
ಹಿತನುಡಿಯ ಮಂಜನು ಮೈಮೆಲೆರಚಿ
ಪ್ರೇಮ ಮಂತ್ರವ ಸಾರಿದ
ಒಲುಮೆ ಸಾಧಕ ನೀನು.
ರಕ್ತ ಮಾಂಸದ ಜೊತೆಗೆ ದಿನ ದೂಡುತಲಿರಲು
ಪ್ರೀತಿ ಕರುಣೆಯ ಜ್ಯೋತಿಯ
ಬೆಳಗಿಸಿದೆಯಲ್ಲೋ.
ಓ! ಕರುಣಾಳು
ಪೊರೆದೆ ಇಂದೆನ್ನನು
ಬುದ್ಧನಾಗಿದೆಯಲ್ಲೋ
ನಿನ್ನಂತೆ ನನ್ನನು.
– ರೇಷ್ಮಾ ಉಮೇಶ, ಭಟ್ಕಳ