ಕಾವ್ಯ ನಾಯಕಿ
ನೀನು ನನಗೆ ದೂರವಾಗಿದೆ ಎಂದು
ಹಾಗಾಗ ಅನಿಸುತ್ತದೆ
ಮನಸ್ಸಿಗೆ ಯಾಕೋ ಚಿಂತ
ನಾನಾಗಿ ನಾನು ಚೇತರಿಸುಕೊಳ್ಳುತ್ತೇನೆ
ಉತ್ತರ ಹೇಳು ಕೊಳ್ಳುತ್ತೇನೆ
ಸಂತುಷ್ಟ ನಾಗುತ್ತೇನೆ
ನೀನು ಯಾವಾಗಲಾದರೂ ಬರುವೆಂದು
ನನಗೆ ಯಾಕೋ ಗಟ್ಟಿಯಾದ ನಂಬಿಕೆ!
.
ಅಷ್ಟರೊಳಗೆ ನನ್ನ ಹತ್ತಿರ ಬಂದು
.
ಅಷ್ಟರೊಳಗೆ ನನ್ನ ಹತ್ತಿರ ಬಂದು
ಮುಗುಳ್ನಗೆಯಿಂದ ನನ್ನ ಶ್ರಮ ತೀರುಸುತ್ತಾ
ನನ್ನ ನೋವು ಕ್ಷಣಕಾಲ ಕಡಿಮಿಮಾಡಿ
ನಿರಾಶೆದಲ್ಲಿದ್ದ ನನ್ನ ಹೃದಯಕ್ಕೆ
ಬೆಳಕು ಕಿರಣಗಳನ್ನು ಹಂಚುತ್ತಾ
ನನ್ನಲ್ಲಿ ಹುಣ್ಣಿಮೆ ಕಾಂತಿ ತುಂಬಿಸಿ
ನನ್ನನ್ನು ಬೆಳೆಸುತ್ತಾ ಇರುವೆವು!
‘
ನಿನ್ನನ್ನು ಹಾಗೆ ನೋಡುತ್ತಾ ಇರುತ್ತೇನೆ
ಕ್ರಮವಾಗಿ ನನ್ನನ್ನು ನಾನೇ ಮರೆತು
ನನ್ನ ಇರುವುಕೆ ಎಲ್ಲಿದೆಎಂದು ಹುಡುಕುತ್ತಾ
ನಾನು ಯಾಕೋ ನಿನ್ನಕಡೆ ನೋಡುತ್ತಾ ಇರುತ್ತೇನೆ
ನಿನ್ನಲ್ಲಿ ನಾನೇನಾದರೂ ಕಾಣಬಹುದಾ ಎಂದು
ನೀನು ಚಮತ್ಕಾರವಾಗಿ ಮಾಯವಾಗುತ್ತೇವೆ
ನನ್ನನ್ನು ಒಂಟಿಯಾಗಿ ಹಾಗೆ ಬಿಟ್ಟು!
‘
‘
ಇಷ್ಟ ಇಬ್ಬರಲ್ಲಿ ಇದ್ದರೆ ಅದೇ ಪ್ರೀತಿಯೆಂದು
ನನ್ನ ಮನಸ್ಸಲ್ಲಿ ನಂಬುತ್ತಾ ಇದ್ದೆ
ನಿನ್ನ ಇಷ್ಟ ನನಗೆ ಯಾವಾಗಲೂ ಅರ್ಥ ಆಗುವುದಿಲ್ಲ
ಕ್ಷಣ ಕಾಲದಲ್ಲಿ ನನ್ನ ಜೊತೆ ಮತ್ತೊಂದು ಕ್ಷಣ ಮಾಯ
ನನ್ನನ್ನು ಬಿಟ್ಟು ದೂರವಾಗುತ್ತೇವೆ
ಸರೇ! ಇಷ್ಟಯೆನ್ನುವುದು ಯಾವಾಗಲೂ ಏಕ ಪಕ್ಷವೆ!
‘
ನಿನ್ನನ್ನು ತಪ್ಪಿದರೆ ನಾನು ಮತ್ತೊಬ್ಬರನ್ನು ಒಪ್ಪುವುದಿಲ್ಲ
ನಿನ್ನ ಪ್ರೀತಿಗೆ ಹೃದಯವೇ ಪ್ರಮಾಣವೆಂದು
ನನಗೆ ಧೈರ್ಯ ಹೇಳುತ್ತಾ ಇರುತ್ತೇವೆ
ನಗುವ ಜೊತೆ ವಿಸ್ಮಯ ವಾಗುತ್ತದೆ
ಅದರ ನಂಬಿಕೆಯ ಮುಂದೆ ನಾನೆಷ್ಟು ಎಂದು!
-ಪ್ರಭಾಶಾಸ್ತ್ರಿ ಜೋಶ್ಯುಲ, ಮೈಸೂರ್.