ತವರಲ್ಲಿ ಸಿರಿ ಇಲ್ಲ
ಮನದಲ್ಲಿ ಗೆಲುವಿಲ್ಲ
ನಿಮ್ಮ ಎದೆ ಆಸರೆಯು
ಬಯಸುತ್ತಿದೆ ಮನವು.
ಹಾಲುಹಣ್ಣುಗಳೆಲ್ಲ
ರುಚಿಯುಗೆಟ್ಟಿಹುದಿಂದು
ನಿಮ್ಮ ಪ್ರೀತಿ ಸಿಹಿಯೊಂದೆ
ಕಾಯುತ್ತಿದೆ ಮನವು.
ಯಾರ ಆರೈಕೆ ಬೇಕಿಲ್ಲ
ನನಗಿಂದು
ನಿಮ್ಮ ತೋಳಲಿ ಸೇರಿ
ಬಂಧಿಯಾಗುವೆನಲ್ಲಿ.
ರೇಷಿಮೆಯು ಜರಿತಾರೆ
ಏನೂ ಕೇಳೆನು ನಾನು
ಪ್ರೇಮಧಾರೆಯಲಿ ಮನಬಿಚ್ಚಿ
ಮೀಯೋಣವೇನು.
ಕುಂತರೂ ನಿಂತರು
ನಿನ್ನ ನೆನಪುಗಳೇ ಜೊತೆಗೆ
ನಿಲ್ಲಲಾಗದು ಇನ್ನು
ಹಾರಿ ಬರುವೆನು ನಾನು.
-ಉಮೇಶ ಮುಂಡಳ್ಳಿ ಭಟ್ಕಳ