ಲಕ್ಷ್ಮೀ ಬಾರಮ್ಮ ಶಾರದೆ ಇರಬಾರದೆ?
ಲಕ್ಷೀ ನನ್ನ
ಜೊತೆಯೇ
ಇರುತ್ತಾಳೆ ;
ಆದರೆ ನಿಲ್ಲುವುದಿಲ್ಲ ;
ಓಡಾಡುತ್ತಲೇ
ಇರುತ್ತಾಳೆ ;
ನಿಲ್ಲೆಂದರೂ
ನಿಲ್ಲುವುದಿಲ್ಲ ;
ಬಾ ಎಂದರೂ
ಬರುವುದಿಲ್ಲ !
.
ಶಾರದೇ ಹಾಗಲ್ಲ :
ಶಾರದೇ ಹಾಗಲ್ಲ :
ನನ್ನ ಜೊತೆಗೆ ಇರುತ್ತಾಳೆ ;
ನಾ
ಹೋದಕಡೆಗೆಲ್ಲಾ
ಬರುತ್ತಾಳೆ ;
ನನಗೆ
ಹೆಸರನ್ನೂ ತರುತ್ತಾಳೆ ;
ಕೆಲವೊಮ್ಮೆ ನನ್ನ
ಮಾನವನೂ
ಉಳಿಸುತ್ತಾಳೆ !
.
ಆದರೆ ನನಗೆ
ಆದರೆ ನನಗೆ
ಲಕ್ಷೀಯೂ ಬೇಕು ,
ಶಾರದೆಯೂ ಬೇಕು ;
ಇಬ್ಬರೂ ಸದಾ
ನನ್ನ ಜೊತೆಯಿರಬೇಕು ;
ಲಕ್ಮೀ
ನನ್ನ ಕೈಯಲಿದ್ದು,
ಓಡಾಡಿಕೊಂಡಿರಬೇಕು ;
ಶಾರದೆ
ನನ್ನ ನಾಲಿಗೆಯಲ್ಲಿ
ನೆಲೆನಿಂತು,
ನನ್ನ
ನೋಡಿಕೊಂಡರೆ ಸಾಕು !
-ಎಚ್ ಆರ್ ಕೃಷ್ಣಮೂರ್ತಿ, ಶಿವಮೊಗ್ಗ