ವಿಕೋಪ
.
ತಂಪು ಸಂಜೆಯಲಿ ಅಡಗಿದ್ದ ಕರಿಮೋಡ
ಭಗ್ಗನೆ ಉರಿಯಿತು, ಜ್ವಾಲೆಯಾಗಿ
ಇಳೆಯನೊಮ್ಮೆ ಅಳಿಸಿತು.
ಬೊಗಸೆ ನೆತ್ತರ ಕುಡಿವ ರಾಕ್ಷಸ
ಬಂದನೆಂದು ಓಡಿ ಪಟಪಟನೆ
ಅಡಗಿದಲ್ಲಿ ಬಂದು ಬಿದ್ದಿತು
ರಕ್ಕಸನ ಒಂದು ಬಲಿಯು
ಜ್ವಾಲಾರಕ್ಕಸ ಅಪ್ಪಳಿಸಿ ಬಗೆದನು
ಇಂಚಿಂಚೂ ರಕ್ತ-ಮಾಂಸವ
ಕ್ಷಣವು ಇಲ್ಲ, ಕಣವು ಇಲ್ಲ
ಉಳಿದ ಕ್ಷಣಗಳು ಲೆಕ್ಕ ಮಾತ್ರ.
ಹರಿಯುತಿದೆ ನೆತ್ತರ ಕೋಡಿ
ನಡೆದಿದೆ ಪರಮಾಣು ಬಲಿಗಳು
ಜ್ವಾಲೆಯಾರುತ ಉಂಡಿತೆಲ್ಲವ
ಮತ್ತೆ ಹಸಿವಾದರೆ, ಬರುವೆನೆನುತ
ಉಳಿದದೆಷ್ಟು? ಹೋದದೆಷ್ಟು?
ಮತ್ತೆ ಬರಲಿರುವ ಸಮಯವೆಷ್ಟು?
ದೀಪದ ಕಿಡಿ ಜ್ವಾಲೆಯಾಗಲು
ಅಣುವಿನ ಹೊಸ ಆಟ ಸಾಕು
-ಗೌರೀಶ್ ಅಬ್ಳಿಮನೆ
.