ಕಾಮನಬಿಲ್ಲು
ನೀಲ ನಭ, ನವಿರು ಹಾಳೆ
ಮಳೆ ಬೆಳಕಿನ ಸಂಯೋಗ ಲೀಲೆ
ಸೃಜಿಸಿದಿದೋ ಕಾಮನಬಿಲ್ಲು
ನೋಡುಗರ ಹೃನ್ಮನಗಳಲ್ಲೂ
ಕಿರಣಸ್ಪರ್ಶದಿಂದ ಬಣ್ಣ
ಸ್ಪುರಿಸಿತೇನು ನೀರ ಕಣ್ಣ
ದಿಕ್ಕುಗಳಿಗೆ ಸೇತುವಾಗಿ
ಬಾಂದಳದಿ ಕೇತುವಾಗಿ
ಹನಿಯ ಕೆನ್ನೆ ಮೆಲ್ಲ ಸವರಿ
ಮುತ್ತನಿತ್ತ ರವಿಯ ಪರಿ
ಹಿಡಿಸಿತೇನ ಪ್ರೀತಿ ಗುಂಗು
ಏರಿತೇನ ಕೆನ್ನೆ ರಂಗು
ರಜವ ತೊಳೆದು ತಮವ ತುಳಿದು
ಸಪ್ತವರ್ಣದ ಸತ್ವ ಬಳಿದು
ಬಾಳಿನೋಟನೋಟಗಳಲಿ
ಇಂದ್ರಧನುವು ಮೂಡುತಿರಲಿ
– ಚಿತ್ತರಂಜನ್
ಸಾಮಾನ್ಯವಾಗಿ, ಬಾಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರುವ ಕಾಮನಬಿಲ್ಲಿನಲ್ಲಿ ಅದ್ಭುತ ಪದಪುಂಜಗಳನ್ನು ಬಳಸಿಕೊಳ್ಳುವುದರೊಂದಿಗೆ ಪ್ರಬುದ್ಧ ಕವಿತೆಯೊಂದರ ಜನ್ಮಕ್ಕೆ ಕಾರಣವಾಗಿದೆ. ಇನ್ನೊಂದಿಷ್ಟು ಕವಿತೆ ಉದ್ದಮಾಡಬಹುದಾಗಿತ್ತೇನೊ……………? ಶುಭವಾಗಲಿ.