ಯೋಗಾರೋಗ್ಯ
ತನುವಿನಾರೋಗ್ಯವಿರಲು
ಲಭಿಸೆ ಮನದಾರೋಗ್ಯ
ತನು ಮನವು ದೃಢಗೊಳಲು
ಅದುವೆ ನಿಜ.. ಮಹಾಭಾಗ್ಯ
ಹಿತಮಿತದ ಆಹಾರ
ನಿತ್ಯ ಜೀವನದ ಸಾರ
“ಯೋಗ” ದಾಯೋಗವದು
ನಿಜ ಉಪಯೋಗ ಅಪಾರ
“ಪತಂಜಲಿ” ಅತಿ ಸುಲಭ ಯೋಗ
ಮನುಜಕುಲಕುಪಯೋಗ
ಅಳವಡಿಸೆ ದಿನ ಜೀವನದಿ
ಖಚಿತ.. ದೇಹವದು ಇರೆ ನಿರೋಗ..!
ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.. 🙏🙏
-ಶಂಕರಿ ಶರ್ಮ, ಪುತ್ತೂರು.
ಯೋಗದ ಮಹತ್ವ ಸಾರುವ ಕವಿತೆ ಚನ್ನಾಗಿ ಮೂಡಿಬಂದಿದೆ. ಇಂದಿನ ಯುವಕರಿಗೆ ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು ಸರ್ವ ಸಂಬ್ರಮವು ತನ್ನಲ್ಲಿದ್ದಂತೆ. ಅಂತಹ ಯುವಕರು ಇಂತಹ ಯೋಗ ಸಂಬ್ರಮಕ್ಕೆ ಸೆಳೆಯುವ ಕವಿತೆ ರಚನೆಯಾಗಲಿ. ಶುಭಮಸ್ತು.