“ಗುಬ್ಬಿ ಸಮಯ”
ನಾನು ಗುಬ್ಬಿ..
ಶಿಸ್ತಿನಲ್ಲಿ ಬಹಳ ಫೇಮಸ್ಸು,
ನನಗೆ ಸಾಟಿ ನನ್ನದೇ ತೇಜಸ್ಸು.
ಯಾರನು ಕಾಯದೇ ಮಾಡುವೆ
ನನ್ನ ನೌಕರಿ..
ಹಾರುತಾ ಏರುತಾ ಸಮಯದ ಮೇಲೆ ಸವಾರಿ.
ನಾನು ಗುಬ್ಬಿ..
ಕೆಲಸದಲ್ಲಿ ಬಹಳ ಫೇಮಸ್ಸು,
ನನಗಿದೆ ನನ್ನದೇ ವಿಶಿಷ್ಟ ವರ್ಚಸ್ಸು.
ಗಡಿಯಾರದ ಎದೆಬಡಿತ ನಿಮಿಷಕ್ಕೆ
ಅರವತ್ತು.
ನನ್ನ ಹೃದಯದ ಇಚ್ಚಾಶಕ್ತಿ ತುಡಿತ
ನಾನೂರರವತ್ತು.
ನಾನು ಗುಬ್ಬಿ..
ಬಹಳ ಕಡಿಮೆ ನನಗೆ ಆಯಸ್ಸು,
ಗೂಡು ಬಿಟ್ರು ಬಿಡದೇ ಪಡೆವೆ
ಯಶಸ್ಸು.
ನನ್ನ ಪಾಡಿಗೆ ನನ್ನದೇ ಹಾಡ
ಹಾಡುವೆ,
ನೋವೊ ನಲಿವೊ ಸಂಭ್ರಮಿಸುತಾ
ನಾನು ಬದುಕುವೆ.
ನಾನು ಗುಬ್ಬಿ..
ಕಾಯುತಾ ಕೂರೆನು ಒಳ್ಳೆ
ಸಮಯವ…
ಬದುಕುತಾ ಹೋದರೆ ಎಲ್ಲವೂ
ಆಗುವುದೇ
ಗುಬ್ಬಿ ಸಮಯವು.
– ಶರತ್ ಪಿ.ಕೆ, ಹಾಸನ
ಗುಬ್ಬಿ ಯಾವಾಗಲು ಸೊಗಸೇ….
ನಾನು ಗುಬ್ಬಿ ……..ಸೂಪರ್
ಸೊಗಸಾದ ಗುಬ್ಬಿ ಕಂಡ ಹಾಗೇ ಆಯ್ತು..