ಕೈ ಹಿಡಿದು ನಡೆಸು(ಪ್ರಾರ್ಥನೆ)
ಪರಂಜ್ಯೋತಿ ಪರಮಾತ್ಮ
ನಡೆಸು ಕೈ ಹಿಡಿದು
ಕಷ್ಟಗಳ ಮೆಟ್ಟಿನಿಲೆ
ಧೈರ್ಯ ತುಂಬುವುದು II
ಸದ್ಗುಣಗಳೇ ಬರಲಿ
ಎಲ್ಲೆಡೆಯು ಹರಿದು
ಸತ್ಕರ್ಮ ಸಂಪ್ರೀತಿ
ವೈಮನಸು ಮುರಿದುII
ನಾವೆಲ್ಲ ಬಂಧುಗಳು
ಪ್ರೀತಿಯೇ ಬದುಕು
ಕರುಣಾಳು ಈ ಪಥದಿ
ನೀ ನೀಡು ಬೆಳಕುII
.
-ಶಂಕರಿ ಶರ್ಮ ಪುತ್ತೂರು.