ಪ್ರವಹಿಸು ಭಾವನದಿ
ನನ್ನೊಳಗೆ ಸೆರೆಯಾಗಿ ಅವಿತಿರುವೆ ಏಕೆ
ಹೊರಬಂದು ವಿಹರಿಸು ಸ್ವಚ್ಛಂದವಾಗಿ
ಸ್ವತಂತ್ರನಲ್ಲವೆಂಬ ಭಯವೇಕೆ
ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ
ನನ್ನ ನಿನ್ನ ನಡುವೆ ಭೇದವೆನೆಣಿಸದಿರು
ಕಡಿದು ಹೋದೀತು ಸ್ನೇಹದ ಕೊಂಡಿ
ವಿಧಿವಿಲಾಸಕೆ ಸುಮ್ಮನೆ ಬಲಿಯಾಗದಿರು
ತೋಡದಿರು ಕಂದಾಚಾರದ ಗುಂಡಿ
ಲೋಕಮಾನ್ಯವಾಗುವ ಆಸೆಯಿಲ್ಲವೆ ನಿನಗೆ
ಈಜಿ ದಡಸೇರು ಕೈ ಸೋಲುವ ಮುನ್ನ
ನೀನಿಲ್ಲದ ಜಗವ ಊಹಿಸಲಾಗದೆನಗೆ
ಹಗಲಿರುಳು ಧೀ ಶಕ್ತಿಯಿಂದ ಮುನ್ನಡೆಸೆನ್ನ
ಯಾರ ಹಂಗಿಲ್ಲದೆ ಬದುಕುವ ನಾವು
ಭಾವನೆಯೇ ಇನ್ನಾದರೂ ಜಾಗೃತವಾಗು
ಬರದಿರಲಿ ನಿನಗೆ ಎಂದಿಗೂ ಸಾವು
ಭಾವನಾ ಲೋಕದಿ ನೀ ಅಜರಾಮರನಾಗು
.
– ಲಕ್ಷ್ಮೀಶ ಜೆ.ಹೆಗಡೆ
ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ…ವಾವ್…!ಗುಡ್. ಒಳ್ಳೆಯ ಕವನ.