ಹಯಕು

Share Button

 

ಮಿಂಚಿನ ಕರವ
ಅತೀತಕ್ಕೆ ಚಾಚಿ
ಇದೋ ಕವಿತೆ !
**
ಮರಿ ಹಕ್ಕಿಯ
ಕೌತುಕದ ಕಣ್ಣಲ್ಲಿ
ಜಗ-ಸೋಜಿಗ !
**
ಸಾವೊಂದು ಕಹಿ
ವಾಸ್ತವ;ಸಿಹಿ ಸುಳ್ಳು
ಎಲ್ಲ ಬದುಕು
**
ನಾನೆಂಬುದರ
ಆಚೆಯ ತೀರ ಎಲ್ಲಿ
ಎಲ್ಲಿದೆ ನಾವೆ
**
ಎದೆ ಕಡಲು
ಉಕ್ಕಿ ಹರಿಯಿತೀಗ
ನೀನು ಹುಣ್ಣಿಮೆ


-ಡಾ.ಗೋವಿಂದ ಹೆಗಡೆ

1 Response

  1. ಸಂಗೀತ ರವಿರಾಜ್ says:

    ಚೆನ್ನಾಗಿವೆ….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: