ಪರದೆ
ಒಳಗೆ ಬೆಟ್ಟದಷ್ಟು ಸೂರ್ಯನ
ಆಸೆಯಿದ್ದರೂ ಮೇಲೆ ಬಿಳಿ
ಹೊದಿಕೆಯೇಕಮ್ಮ ಮಂಜಿಗೆ
ಒಳಗೆ ಆಕಾಶದಷ್ಟು ಭುವಿಯ
ಆಸೆಯಿದ್ದರೂ ಮೇಲೆ ನೀಲಿ
ಪರದೆಯೇಕಮ್ಮ ಗಗನಕೆ
ಒಳಗೆ ಭೂಮಿಯಷ್ಟು ಬಾನ
ಮೇಲೆ ಆಸೆಯಿದ್ದರೂ ಹಸಿರು
ಹೊದಿಕೆಯೇಕಮ್ಮಇಳೆಗೆ
ಒಳಗೆ ಕಡಲಾಳದಷ್ಟು ಶರಧಿಯ
ಆಸೆಯಿದ್ದರೂ ಮೇಲೆ ಜುಳುಜುಳು
ಸದ್ದೇಕಮ್ಮ ಹೊಳೆಗೆ
,
- ಸುಮನ ದೇವಾನಂದ