ಸುರಗಿ ಹೂಗಳಿಗೆ ಹೊಸ ವರ್ಷದ ಶುಭ ಆಶಯ….!!
ಪ್ರೀತಿಯ ಹಾರೈಕೆ ನಿಮ್ಮೆಲ್ಲರಿಗೆ ಇಂದು
ಸುಗಮವಾಗಲಿ ತುಂಬು ಜೀವನವು ಮುಂದು
ರಮ್ಯತೆಯ ಕಂಪು ತೇಲಿ ಬರಲಿ ಎಂದೆಂದು
ಗಿರಿಜಾಪತಿ ಕಾಯುವನು..ಮುಂದು.. ಎಂದೆಂದು
ಹೂವಿನ ಪಕಳೆಗಳೇ…ಹಾರಿ ಹೋದವು ಎಲ್ಲಿ..??
ಗಮ್ಯತೆಯ ತಲಪುವವೇ…ಗುರಿ ಎಲ್ಲಿ..ಎಲ್ಲ್ಲಿ..??
ಕಳಿಸಿದವೊ ತಂಪೆಲರ ತುಂಬಿ ಅಲ್ಲಲ್ಲಿ..
ಗೆಳೆತನದ ಪಕಳೆಗಳೆ ಅಲ್ಲಲ್ಲೆ ನಿಲ್ಲಿ…
ಹೊಸ ಆಸೆ ..ಹೊಸ ಕನಸು..ತುಂಬಿ ಬಂದಿಹುದು
ವರ್ಷವದು ಹಿನ್ನಡೆಯೆ ನೆನಪು ಕಲಕಿಹುದು
ಶುಭ ನಮನ..ಶುಭ ಹರಕೆ..ಶುಭ ದಿನಗಳಿಹುದು
ಆಶಯವು ತುಂಬಿಬರೆ ಮನಕೆ ಮುದವಿಹುದು
.
– ಶಂಕರಿ ಶರ್ಮ,ಪುತ್ತೂರು
” ಗೆಳೆತನದ ಪಕಳೆಗಳೆ ಅಲ್ಲಲ್ಲೆ ನಿಲ್ಲಿ…” ಎಷ್ಟು ಸೊಗಸಾದ ಅಭಿವ್ಯಕ್ತಿ ! ಇಷ್ಟವಾಯಿತು .
ಎರಡನೆಯ ಪ್ಯಾರಾ ಕೋಮಲವಾದ ಪ್ರತಿಮೆಗಳಿಂದ ಧ್ವನಿಪೂರ್ಣವಾಗಿದೆ. ನೈಸ್.
ಪ್ರೀತಿಯ ಮಾಲಾ ಮತ್ತು ಜಯಶೀ…ಇಬ್ಬರಿಗೂ ಧನ್ಯವಾದಗಳು..ನಿಮ್ಮ ಮೆಚ್ಚುಗೆಗಾಗಿ ಕೃತಜ್ನತೆಗಳು..ಮೆಚ್ಚಿ ಪ್ರತಿಕ್ರಯಿಸಿದ ಎಲ್ಲರಿಗೂ ನಮನಗಳು..