ಬೆಂಕಿಯಲ್ಲರಳಿದವಳು
ವೇದನೆಯೊಳಗೂ ಸಾಧನೆಗೈವಳು ಹೆಣ್ಣು
ತಾ ಕಷ್ಟದೊಳಿದ್ದರೂ ತೆರೆಯುವುದು ಕಣ್ಣು
ನಮ್ಮೆಲ್ಲರ ಹುಟ್ಟಿನ ನೋವು ಸಹಿಸಿ
ಒಲವಿನ ನಮ್ಮನ್ನೆಲ್ಲಾ ಸಲಹಿ
ಬತ್ತಿಯಾಗಿ ತಾ ಉರಿದು
ಬಾಳ ಬೆಳಗುವಳು ಹೆಣ್ಣು
ಜಗದಿ ಅವಳದು ನೂರಾರು ರೂಪ
ಎಲ್ಲದರಲ್ಲೂ ನೊಂದಿಹಳು ಪಾಪ
ಪುರುಷನ ಈ ದಬ್ಬಾಳಿಕೆ
ಕಸಿದುಕೊಂಡಿದೆ ಅವಳ ಬಾಳಿಕೆ
ಅವಳಿಂದಲೇ ಬಂದವು ಜಗಕೆ
ದಣಿವರಿಯದೆ ಕೊರಳೊಡ್ಡಿಹಳು ನೊಗಕೆ
ನಮ್ಮ ಸಲುಹಿದ ಅವಳಿ ಕಾರ್ಯಕೆ
ನರಳಿಸುತ್ತಿಹೆವು ನಮ್ಮ ಪ್ರಾಬಲ್ಯಕೆ
ಬೆಂಕಿಯಲೂ ಅರಳುವ ಛಲ
ಅಬ್ಬಾ! ಆಕೆಯದಿಂತಾ ಮನೋಬಲ
ಕುಗ್ಗಿಸಿದೆಡೆಯಿಂದಲೇ ಬೇಧಿಸಿ
ಸಾಧಿಸಿ ತೋರಿಹಳು ಸಂಭ್ರಮಿಸಿ
ಕಿರುಕುಳದ ತಳಮಳದಲೂ
ಫಳಫಳ ಹೊಳೆಯುವಳು
ಜಗ ಹೀಗೇ ಎಂದು ತಿಳಿದಿದ್ದರೂ
ಕಾಯಕವನೆಂದು ಮರೆಯಳು
ನಮ್ಮ ಗೆಲುವಿಗೆ ದುಡಿಯುವ
ಗುಲಾಮಳು ಅವಳು
ತಾ ನೊಂದರೂ ನಮ್ಮ ನೋವಿಗೆ
ಮುಲಾಮಾದವಳೂ………
.
– ಅಮುಭಾವಜೀವಿ