ಸುನಾಮಿ ಸುನಾಮಿ
ಬೇಕು ಬೇಡಗಳ ಮಧ್ಯೆ
ಕರಗುವ ಕಲ್ಲುಬಂಡೆ
ಆಸೆಯೇ ದುಃಖಕ್ಕೆ ಮೂಲ
ಹುಡುಕಿ ಹೊರಟ ತೊರೆ
ಕಲ್ಲು ಕರಗಿಸಿ, ಮಣ್ಣು ಸೋಸಿ
ತಿಳಿಯಾಗಿದೆ.. ಜಗತ್ತು ಕಾಣುತ್ತಿದೆ ಅಲ್ಲಿ
ಎಲ್ಲರ ಕಣ್ಣುಗಳಲ್ಲಿ ಖಡ್ಗಗಳಿವೆ
ಮೈಮನಸುಗಳ ಸೀಳುತ್ತಿವೆ
ಜಾತಿ ಧರ್ಮಗಳ ನೆರಳುಗಳಿಲ್ಲದ ಹೆಮ್ಮರಗಳು
ಸಾವಿರವಲ್ಲಿ
ಭೂಮಿಯ ಒಡಲ ತುಂಬೆಲ್ಲ ತೆರೆದ ಶಸ್ತ್ರಚಿಕಿತ್ಸೆ
ಹಳ್ಳಕೊಳ್ಳಗಳು ಖಾಲಿ ಇವೆ
ದುಡಿದ ಆಳುಗಳ ಹಸಿವು ಇಂಗಿಸಲು
ಹಳ್ಳದಲ್ಲಿ ಮಲಗಿ ಮಣ್ಣುಮುಚ್ಚಿ ಚಿನ್ನವನ್ನೆ ಮೆಲ್ಲುತಿಹ
ತಿಳಿನೀರ ಕಣ್ಣಲ್ಲಿ ತಿಳಿನೀಲಿ ಕಡಲಂಚು ಕಡಲು
ನನ್ನದೆಂಬ ಹಕ್ಕುಸ್ವಾಮ್ಯ ದೇಶಗಳು
ಕಂಡ ಕಡಲು ಗಹ ಗಹಿಸಿ ನಗುತಿದೆ
ಒಮ್ಮೆ ಜೋರಾಗಿ
ಸುನಾಮಿ.. ಸುನಾಮಿ…..
– ಗೀತಾ, ಸುತ್ತೂರು