ಇಬ್ಬನಿಯ ಮದರ೦ಗಿ…?!
.
ಧರಣಿಯ ನೋಡೊ ಕುತೂಹಲದಿ ಚಿಗುರಿದ ಹೂಗಳಿಗೆ
ಹಸಿರಸಿರಾಗಿ ಮೈದು೦ಬಿದ ಚೆಲುವೆಗೆ ಮಡಿಲಕ್ಕಿಯ
ನೀಡುವ ಆಸೆಯಾಯಿತು…
.
ಕಿಲಕಿಲನೆ ನಗುಚೆಲ್ಲಿದ ಹೂಗಳ ಹಿ೦ಡೇಕೊ
ಪದವಾಡಿ ದೃಷ್ಟಿ ತೆಗೆಯಲು ಹೊ೦ಗಿರಣದ ಆರತಿ
ಮಾಡಿಯಾಯಿತು…
.
ಬಿಡುವಿಲ್ಲದ ರವಿಮಾಮನು ಹೂಗಳ ಗು೦ಪನು
ಸತಾಯಿಸುತಿರಲು ಕಮಲಿಯು ನಾಚಿದಳು,
ಮಲ್ಲೆ,ಜಾಜಿ,ಸ್ಪಟಿಕಗಳ ಕೆನ್ನೆಯು ರ೦ಗೇರಿತು…
.
ಹಸಿರುಸಿರಿನ ಒಲವಿಗೆ ಜೊತೆಯಾದ ಹೂಗಳಿಗೆ
ತೋಟಗಾರನಾಗುವ ಬಯಕೆ ನೇಸರನಿಗೆ ಏಕಾಯಿತು..!
ತಿಳಿಗಿರಣವ ಸೂಸಿ ತುಸುನೆರಳಲೆ ಹೂಗಳ ಕಾದಿಹನು
ಮು೦ಜಾನೆಯ ಬೇಡುತಲಿ ಹೂಗಾತಿಯರ ಕೈಗಳಿಗೆ
ಇಬ್ಬನಿಯ ಮದರ೦ಗಿಯ ಬಿಡಿಸಿಹನು…!
‘
.
– ಸ್ನೇಹಾ ಪ್ರಸನ್ನ
.
supper…
ಧನ್ಯವಾದಗಳು…
ಬರಿ ತೋಟಗಾರ ಮಾತ್ರವಲ್ಲ, ಅವುಗಳ ಬದುಕಿಗೆ ಆಧಾರವಾಗಿ ಆಹಾರ ತಯಾರಿಕೆಗೆ ತನ್ನ ಬೆಳಕನ್ನೇ ಬಸಿದು ಕೊಡುವ ಸಂತನೂ ಹೌದು, ಅನಂತನೂ ಹೌದು – ಕವನ ಚೆನ್ನಾಗಿದೆ
ಧನ್ಯವಾದಗಳು ಸರ್…
ಆತ್ಮಿಯ ಸ್ನೇಹ ಕವನ ಚೆನ್ನಾಗಿದೆ…ನಿಮ್ಮ ಪ್ರತಿ ಕವನದಲ್ಲಿಯು ಆಳವಾದ ಕಲ್ಪನೆಯ ಸಿಹಿ ಇರುತ್ತೆ ಅರ್ಥ ಮಾಡಿಕೊಂದು ಸವಿಬೇಕು.
ಧನ್ಯವಾದಗಳು ಉಷಾ…
ಚೆನ್ನಾಗಿದೆ
ಧನ್ಯವಾದಗಳು…ಸರ್
ಸ್ನೇಹ ಮೇಡಂ ಅತಿ ಅಚ್ಚ ಕನ್ನಡ ಬಳಸುತ್ತಿದ್ದಿರಿ … ಕೆಲವು ಪದಗಳನು ಅರ್ಥಮಾಡಿಕೊಳ್ಳಲು ಕಷ್ಟ ಅನಿಸುತಿತ್ತು. but this time Easyaagi ಅರ್ಥವಾಯಿತು.. last four lines ತುಂಬಾ ಚೆನ್ನಾಗಿದೆ.. ನಿಮ್ಮ ಮುಂದಿನ ಕವಿತೆಯ ನಿರೀಕ್ಷೆಯಲ್ಲಿ….
Thank You niranjaN keep reading surahonne …
ಸುಂದರ ಕನ್ನಡ, ಚೆಂದದ ಕವಿತೆ.. ಓದುತ್ತಾ ಖುಷಿಯಾಯಿತು.. ಹೀಗೇ ಬರೆಯುತ್ತಿರಿ.. 🙂
Thank you…::)….
Supper keep it up…