ರೂಲ್ಸ್ ಬ್ರೇಕ್ ಮಾಡೋದಂದ್ರೆ ಯುವಕರಿಗೆ ಯಾಕೇ ಖುಷಿ?
ಹದಿಹರೆಯವೇ ಹಾಗೇ ಒಂದ್ ಸ್ವಲ್ಪ್ ಕಿರಿಕ್, ಸ್ವಲ್ಪ್ ತುಂಟಾಂಟ, ಮೋಜು-ಮಸ್ತಿ, ಎನೋ ಸಾಧಿಸೋ ಉತ್ಸಾಹ, ಒಂದ್ ಸ್ವಲ್ಪ್ ತರ್‍ಲೆ ಕೆಲಸಗಳು ಇವೆಲ್ಲಾ ಮಾಡಿ ಮಿಕ್ಕಿದ್ರೆ ಚೂರು ಕುತೂಹಲ. ಎನ್ ಮಾಡಬಾರ್‍ದೊ ಅದನ್ನೇ ಮಾಡಿ ತೀರೋ ಹುಚ್ಚು ಸಾಹಸ. ಯಾಕೆಂದ್ರೆ ಅದರಲ್ಲೇನೋ ಒಂಥರ ಖುಷಿ. ಅದಕ್ಕೆ ಇರಬೇಕು ಪಾಪ ಯುವಕರು ಗೋತ್ತಿದ್ದು-ಗೋತ್ತಿದ್ದು ಹಳ್ಳಕ್ಕೆ ಬೀಳೋದು.
ಕೆಲವೊಮ್ಮೆ ಸುಮ್ಮನೆ ಕುಳಿತಾಗ ಥಟ್ಟನೇ ಹೊಳಿಯೋದು ‘ರೂಲ್ಸ್’ ಅನ್ನೋ ಚಿಕ್ಕ ಪದ. ರೂಲ್ಸ್ ಇರೋದೇ ಮುರಿಯೋಕೆ ಅಂಥ ಅನ್ನಿಸೋಕೆ ಶುರು ಆಗೋತ್ತೆ. ಅದಂಥೂ ಗೆಳೆಯರ ಗುಂಪು ಜೊತೆಯಲ್ಲಿದ್ದಾಗ ಹೆಚ್ಚು ಕ್ರಿಯಾಶೀಲವಾಗುತ್ತೆ. ಅದು ಯುವಕರ ತಪ್ಪಲ್ಲ ಅವರು ಬೆಳೆದು ಬಂದ ಹಾದಿ, ವಾತಾವರಣವೇ ಹಾಗೇ ಇರೋತ್ತೆ ಬಿಡಿ. ಅವನು ರೂಲ್ಸ್ ಬ್ರೇಕ ಮಾಡಿದಾ ಆದ್ರೆ ಅವನು ಪಾರಾಗಿ ಬಿಟ್ಟ, ನಾವು ಸ್ವಲ್ಲ ತರ್‍ಲೆ ಮಾಡೋಣ ಅಂಥ ಅನಿಸೋಕೆ ಶುರುವಾಗೋದು ಕ್ರಮೇಣ ಅದೇ ಚಟವಾಗಿ ಬೀಡೋತ್ತೆ.
ಅದ್ರೆ ಒಂದ್ಸಲ್ ಪೆಟ್ಟು ತಿಂದು ಕಹಿ ಅನುಭವ ಆದ್ರೆ ಸಾಕು ದೇವ್ರಾಣೆಗು ಮತ್ತೇ ರೂಲ್ಸ್ ಬ್ರೇಕ್ ಅನ್ನೋ ಪದ ಕೇಳಿದ್ರೇನೆ ಸಾಕು ‘ಅಯ್ಯೋ ಸಾಕಪ್ಪಾ ಸಾಕು’ ಅಂಥ ಉದ್ಗಾರ ಯುವಕರ ಬಾಯಿಂದ ಬರೋತ್ತೆ. ರೂಲ್ಸ್ ಅನ್ನೋದು ಯಾಕೆ ಮಾಡ್ತಾರೆ ಅನ್ನೋ ಪ್ರಜ್ಞೆ ಯುವಕರಿಗೆ ತಿಳಿದಿರೋದಿಲ್ಲ. ತಮಾಷೆ ಅಂದ್ರೆ ಕೆಲವೊಂದು ರೂಲ್ಸ್ ಇದೇ ಅನ್ನೋದೆ ಗೊತ್ತಿರೊದಿಲ್ಲ, ಅನಾಗರಿಕರಂತೆ ವರ್ತನೆ ಮಾಡ್ಬೀತ್ತಿವಿ. ನಾವು ನಮ್ಮದು ಅನ್ನೋ ಕಾಳಜಿ-ಪ್ರಜ್ಞೆ ಇದ್ದಾಗ ಮಾತ್ರ ಎಲ್ಲವೂ ಸರಿಯಾಗಿ ಇರೋಕೆ ಸಾಧ್ಯ.
ಅದಕ್ಕೆ ಇರ್‍ಬೇಕು ಕಹಿ ಅನುಭವಗಳು ಕೆಲವೊಂದು ಸಲ ಸಿಹಿಯಾಗಿ ಉಳಿಯೋದು..
– ಸುರೇಂದ್ರ ಪೈ, ಸಿದ್ಧಾಪುರ