ದೀಪಾವಳಿ…
ಬೆಳಕಿನ ಹಕ್ಕಿ
ಬಣ್ಣ ಬಣ್ಣದ ಹಾಳೆಯ ಅಂಟಿಸಿ
ಮಾಡಿ ಆಕಾಶ ಪುಟ್ಟಿ |
ಹಾರಿಸಲೆಂದು ತುಂಟರು ಕಲೆತರು
ಗೆಳೆಯರ ಗುಂಪು ಕಟ್ಟಿ |
ನಿಗಿ ನಿಗಿ ಬೆಂಕಿಯ ಕೆಂಡದ ಮೇಲೆ
ಬೇವಿನ ತಪ್ಪಲ ಹಾಕಿ |
ಹೊಗೆಯನು ತುಂಬಿ ದೀಪ ಹಚ್ಚಿ
ತೇಲಿ ಬಿಟ್ಟರು ನೂಕಿ |
.
ಕ್ಷಿಪಣಿಯಂತೆ ಚಂಗನೆ ನೆಗೆಯಿತು
ಬೆಳ್ಳಮ್ ಬೆಳಕಿನ ನೌಕೆ |
ಮಕ್ಕಳ ಬಳಗ ಚಪ್ಪಾಳೆ ತಟ್ಟಿ
ಚೀರಿ ಹಾಕಿತು ಕೇಕೆ |
ದೀಪಾವಳಿ ದಿನ ಆಗಸ ತುಂಬ
ಬಣ್ಣದ ರೆಕ್ಕೆಯ ಹಕ್ಕಿ |
ನೋಡಿ ನೋಡಿ ಮಂಕಾಗಿ ಬಿಟ್ವು
ಬನಲ್ಲಿರುವ ಚುಕ್ಕಿ |
‘
ಹಳ್ಳಿ ಹೈದರ ಸಹಜ ಜಾಣ್ಮೆಗೆ
ಬೇರೆ ಸಾಕ್ಷಿ ಬೇಕೆ |
ಇಂಥಾ ಚಂದದ ದೇಸಿ ಆಟವ
ಮರೆತಿದ್ದೇವೆ ಏಕೆ |
– ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ
ತುಂಬಾ ಉತ್ತಮವಾದ ಕವಿತೆ. ಒಳ್ಳೆಯ ಅರ್ಥವನ್ನು ಕೊಟ್ಟಿದ್ದೀರಿ. ಅಭಿನಂದನೆಗಳು.
ಧನ್ಯವಾದಗಳು