ದುಬೈಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಏಪ್ರಿಲ್ 13 ರ ಸಂಜೆ ಜರುಗಿದ “ಸಂಕೀರ್ಣ” ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ಅತಿಥಿಗಳು, ಗುರು, ವಿದುಷಿ, ಶ್ರೀಮತಿ ಸಪ್ನಾ ಕಿರಣ್ ಹಾಗು ಶ್ರೀ ಕಿರಣ್ ಕುಮಾರ್ ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು . ನಾಟ್ಯ ದೇವಾ ನಟರಾಜನಿಗೆ ಭಕ್ತಿ ಪೂರ್ವಕ “ಪುಷ್ಪಾಂಜಲಿ“ಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸಂಕೀರ್ಣದ ವಿದ್ಯಾರ್ಥಿನಿಯರುನಂತರ ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ ,ಶಕ್ತಿಯನ್ನು ಕಾಳಿ ಕೌತುವಂ ಮೂಲಕ, ಥೊಡ್ಯಾ ಮಂಗಳಂ ನಲ್ಲಿ ಮಹಾವಿಷ್ಣುವನ್ನು, ಭಕ್ತ ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನು, ಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ” ದ ಮೂಲಕ ದೇವಿಲಕ್ಷ್ಮೀ ಗೆ ನಾಟ್ಯ ವಂದನೆ ಸಲ್ಲಿಸಿದರು . ಈ ಕಾರ್ಯಕ್ರಮದಲ್ಲಿ ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ...
ನಿಮ್ಮ ಅನಿಸಿಕೆಗಳು…