ದುಬೈ: ‘ಸಂಕೀರ್ಣ’ ನೃತ್ಯ ವೈಭವ
ದುಬೈಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಏಪ್ರಿಲ್ 13 ರ ಸಂಜೆ ಜರುಗಿದ “ಸಂಕೀರ್ಣ” ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ಅತಿಥಿಗಳು, ಗುರು, ವಿದುಷಿ, ಶ್ರೀಮತಿ ಸಪ್ನಾ ಕಿರಣ್ ಹಾಗು ಶ್ರೀ ಕಿರಣ್ ಕುಮಾರ್ ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು .
ಈ ಕಾರ್ಯಕ್ರಮದಲ್ಲಿ ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ ನರ್ತಕಿಯರು ,ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು ‘ವಿಷಮಕರ ಕಣ್ಣನ್ ‘ ಮೂಲಕ ನರ್ತಿಸಿ ಜನರ ಮನ ಗೆದ್ದರು. ಅಯಗಿರಿ ನಂದಿನಿಯ ಮೂಲಕ ನವದುರ್ಗೆಯರು ನೆರೆದವರನ್ನು ರೋಮಾಂಚನಗೊಳಿಸಿದರೆ ,ಕೊನೆಯದಾಗಿ ಪ್ರದರ್ಶನಗೊಂಡ ‘ಧರ್ಮಕ್ಷೇತ್ರ ‘ ಕೃಷ್ಣಾರ್ಜುನರ ಗೀತೋಪದೇಶದ ನೃತ್ಯವನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತಿತ್ತು.
2011ನೇ ಇಸವಿಯಲ್ಲಿ ಸಾಕಾರಗೊಂಡ ಗುರು , ವಿದುಷಿ ಶ್ರೀಮತಿ ಸಪ್ನಾ ಕಿರಣ್ ಅವರ ಸ್ವಪ್ನ ಇದು. ಇಲ್ಲಿ ಭಾರತದಾದ್ಯಂತದ ವಿದ್ಯಾರ್ಥಿನಿಯರು ಭರತನಾಟ್ಯಂ ಅನ್ನು ಶಾಸ್ತ್ರೀಯವಾಗಿ ಗುರು ಪರಂಪರೆಯ ಮಾದರಿಯಲ್ಲಿ ಅಭ್ಯಾಸ ಮಾಡುತ್ತಾರೆ .ಗುಣಮಟ್ಟ ಹಾಗು ಸಾಂಪ್ರದಾಯಿಕ ಶೈಲಿಗೆ ಹೆಸರಾದ ‘ಸಂಕೀರ್ಣ’ ಯು .ಎ .ಇ ಯಲ್ಲಿ ಹಾಗು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಬಹುತೇಕ ಪ್ರತಿವರ್ಷವೂ ಇಲ್ಲಿನ ಒಂದು ಅಥವಾ ಎರಡು ವಿದ್ಯಾರ್ಥಿನಿಯರು ರಂಗ ಪ್ರವೇಶ ಮಾಡುತ್ತಾರೆ.
ವರದಿ : ಆರತಿ ಅಡಿಗ , ಶಾರ್ಜಾ
ಶುಭವಾಗಲೀ
‘ಸಂಕೀರ್ಣ’ದ ಎಲ್ಲಾ ಪದಾಧಿಕಾರಿಗಳಿಗೂ, ಕಲಾವಿದರಿಗೂ ಅಭಿನಂದನೆಗಳು.